Saturday, February 28, 2009

ತುಂಟ'ನಲ್ಲ'

ಕಲ್ಲುಸಕ್ಕರೆ ಇವಳ ಗಲ್ಲ
ಕೆನ್ನೆಗಳೆರಡು ರಸಗುಲ್ಲ
ಸೊಂಟವ ಹಿಡಿಯಲು ಬಿಡಲಿಲ್ಲ
ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!!

- Vರ ( Venkatesha ರಂಗಯ್ಯ )

ಶೂರ್ಪನಖಿ (ಶಾಯರಿ)

ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು
ನನ್ನ ಟೆಲಿಫೋನ್ ಸಖಿ
ಭೇಟಿಯಾದಾಗಲೇ ನನಗೆ ಗೊತ್ತಾಯಿತು
ಅವಳು ಶೂರ್ಪನಖಿ !!

- Vರ ( Venkatesha ರಂಗಯ್ಯ )

"ಮಿಸ್"ಕಾಲು (ಶಾಯರಿ)

ಬರಲಿಲ್ಲ ಎಷ್ಟು ಹೊತ್ತಾದರು
ನನ್ನ ಪ್ರಿಯತಮೆಯ ಮಿಸ್ ಕಾಲು
ಆದರೆ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ
ನನಗೆ ನೋಯುತ್ತಿತ್ತು ಎಡಗಾಲು!!

- Vರ ( Venkatesha ರಂಗಯ್ಯ )

Thursday, February 19, 2009

Once again "ಹೃದಯ ಗೀತೆ"

ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ
ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು
ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ
ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ

ಸ್ನೇಹದಿಂದ ಪುಟಿದೇಳುವ ಪ್ರೀತಿ ಕಾರಂಜಿ
ಬೆಚ್ಚನೆಯ ಬಾಹುಗಳಲಿ ಆಗುವುದು ಪ್ರೀತಿ ಬಂದಿ
ನನ್ನ ಹೃದಯ ವೀಣೆ ಮೀಟುವ ಬೆರಳು ನಿನ್ನದು
ನಿನ್ನ ಜೊತೆಯಲ್ಲಿ ಜೀವಮಾನ ಕಳೆಯುವ ಆಸೆ ನನ್ನದು

ಇನ್ನು ಎಷ್ಟು ಕವಿತೆ ಬರೆಯುವುದು ಉಳಿದು ಹೋಗಿದೆಯೋ
ಇನ್ನು ಎಷ್ಟು ದಿನ ಅವಳಿಗಾಗಿ ನಾ ಕಾಯಬೇಕಿದೆಯೋ
ಎಷ್ಟು ದೂರ ಕ್ರಮಿಸಿದರು ಮುಗಿಯದು ದಾರಿ
ನೀನಿಲ್ಲದೆ ಹೇಗೆ ಸಾಗುವುದು ಪ್ರೀತಿಯ ಅಂಬಾರಿ

- Vರ ( Venkatesha ರಂಗಯ್ಯ )