ಪರದೆಯ ಮೇಲೆ ಪರದಾಡುತಿರುವ ಮನಸುಗಳೆ
ಸರತಿಯ ಮೇಲೆ ಕಾಯುತಿರುವ ಕನಸುಗಳೆ
ಮನಸುಗಳ ತಣಿಸಲು ಬರುತಿರುವ ಹನಿಗಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಕನಸುಗಳ ಹೊಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಬಯಕೆಗಳ ಹೊಳೆ
ಸೂರ್ಯನ ಕಿರಣಕೆ, ಹನಿಗಳ ಚೆಂದಕೆ, ಅರಳುತಿದೆ ಕಾಮನಬಿಲ್ಲು
ಚಂದ್ರನ ಹೊಳಪಿಗೆ, ಇರುಳಿನ ನಾಚಿಕೆ, ಕಾಣುತಿದೆ ಪ್ರತಿ ಹೂವಲ್ಲು
ಹೋಗು ಹೋಗು ಹೇಳಿ ಹೋಗು ಒಗಟಿನ ಉತ್ತರ
ಇರುವೆ ಏಕೆ ನೀನು ಕೈಗೆ ಸಿಗದಷ್ಟು ಎತ್ತರ
Tuesday, December 28, 2010
Friday, December 24, 2010
ಕವಿತೆಗೆ ಸ್ಫೂರ್ತಿ
ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು
ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು
ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು
ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು
ನಿನ್ನ ಜೊತೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು
ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು
ಕಣ್ಣೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು
ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು
ನಿನ್ನ ಕನಸುಗಳು ನವೀನ ಚರಣಗಳಾಗಬಹುದು
ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು
ನೀ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ ಕವಿಯಾಗಬಹುದು
ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು
ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು
ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು
ನಿನ್ನ ಜೊತೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು
ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು
ಕಣ್ಣೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು
ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು
ನಿನ್ನ ಕನಸುಗಳು ನವೀನ ಚರಣಗಳಾಗಬಹುದು
ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು
ನೀ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ ಕವಿಯಾಗಬಹುದು
Monday, December 20, 2010
ಕಣ್ಣೀರ ಕಥೆ
ಕಣ್ಣಲ್ಲಿನ ಕನಸೆಲ್ಲ ಕಣ್ಣೀರಾಗಿ ಹರಿದಂತೆ
ನನ್ನೆದೆಯ ಒಳಗಿಂದ, ನೀ ಎದ್ದು ಹೋದಂತೆ
ನನಗೆ ಭಾಸವಾಯಿತು, ಮೈ ಮೆಲ್ಲನೆ ನಡುಗಿತು
ಗಾಳಿಯಲ್ಲಿನ ತಂಪೆಲ್ಲ ಮರೆಯಾಗಿ, ಬಿರುಗಾಳಿಯಾದಂತೆ
ನನ್ನ ಕನಸಿಂದ ಯಾರೋ ನಿನ್ನ ಕರೆದೊಯ್ಯದಂತೆ
ನನಗೆ ಭಾಸವಾಯಿತು, ಎದೆ ಬಡಿತ ಹೆಚ್ಚಾಯಿತು
ಮುಳ್ಳೆಲ್ಲ ಆಕ್ರೋಶದಿಂದ ಹೂಮೇಲೆ ಬಿದ್ದಂತೆ
ಬಾಳ ಪುಟಗಳಿಂದ ನಿನ್ನ ಹೆಸರು ಅಳಿಸಿ ಹೋದಂತೆ
ನನಗೆ ಭಾಸವಾಯಿತು, ಕಣ್ಣೆಲ್ಲ ನೀರಾಯಿತು
- Vರ ( Venkatesha ರಂಗಯ್ಯ )
ನನ್ನೆದೆಯ ಒಳಗಿಂದ, ನೀ ಎದ್ದು ಹೋದಂತೆ
ನನಗೆ ಭಾಸವಾಯಿತು, ಮೈ ಮೆಲ್ಲನೆ ನಡುಗಿತು
ಗಾಳಿಯಲ್ಲಿನ ತಂಪೆಲ್ಲ ಮರೆಯಾಗಿ, ಬಿರುಗಾಳಿಯಾದಂತೆ
ನನ್ನ ಕನಸಿಂದ ಯಾರೋ ನಿನ್ನ ಕರೆದೊಯ್ಯದಂತೆ
ನನಗೆ ಭಾಸವಾಯಿತು, ಎದೆ ಬಡಿತ ಹೆಚ್ಚಾಯಿತು
ಮುಳ್ಳೆಲ್ಲ ಆಕ್ರೋಶದಿಂದ ಹೂಮೇಲೆ ಬಿದ್ದಂತೆ
ಬಾಳ ಪುಟಗಳಿಂದ ನಿನ್ನ ಹೆಸರು ಅಳಿಸಿ ಹೋದಂತೆ
ನನಗೆ ಭಾಸವಾಯಿತು, ಕಣ್ಣೆಲ್ಲ ನೀರಾಯಿತು
- Vರ ( Venkatesha ರಂಗಯ್ಯ )
Subscribe to:
Posts (Atom)