Thursday, August 21, 2008

ಕನ್ನಡ ತಾಯಿಗೆ ನಮನ

ಎದ್ದೇಳಿ ಕನ್ನಡಿಗರೆ ಎದ್ದೇಳಿ
ಹರಡಲು ಕರುನಾಡ ಕಂಪನ್ನು
ಹಾಡಲು ಕನ್ನಡದ ಹಾಡನ್ನು

ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ
ಊರುಗಳು ಸಾವಿರಾರು ಭಾವನೆಗಳು ನೂರಾರು
ನಮ್ಮ ಭಾಷೆ ಒಂದೆ ಕನ್ನಡ

ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ಎಲ್ಲರು ಸೇರಿ ಮೊಳಗಿಸೋಣ ಕರ್ನಾಟಕದ ಕಹಳೆಯನ್ನು
ಒಟ್ಟಾಗಿ ಮೆರೆಸೋಣ ಕರ್ನಾಟಕ ಕೀರ್ತಿಯನ್ನು

ಕೆಂಪೇಗೌಡರು ಕಟ್ಟಿದರು ಬೆಂಗಳೂರು
ರಾಜ ಮಹಾರಾಜರು ಆಳಿದರು ಮೈಸೂರು
ಶಿಲ್ಪಕಲೆಗಳಿಗೆ ಹೆಸರಾದವು ಹಳೇಬೀಡು ಬೇಲೂರು

ಕಾವೇರಿ ಹುಟ್ಟಿ ಹರಿಯುತಿಹಳು ಕೊಡಗಿನಲ್ಲಿ
ಶರಾವತಿ ದುಮ್ಮುಕ್ಕಿ ಹರಿಯುತಿಹಳು ಜೋಗದಲ್ಲಿ
ಶ್ರೇಷ್ಠ ಕವಿಗಳ ಕವಿಸಾರ ಹರಿಯಿತು ಕರ್ನಾಟಕದಲ್ಲಿ

ಬನ್ನಿ ಕನ್ನಡಿಗರೆ ಒಗ್ಗಟ್ಟಾಗಿ ಬನ್ನಿ
ಕನ್ನಡ ನಾಡು ನುಡಿಯ ಉಳಿಸೋಣ ಬನ್ನಿ
ಕನ್ನಡಾಂಬೆಯ ಆಶೀರ್ವಾದ ಪಡೆಯೋಣ ಬನ್ನಿ

-Vರ ( Venkatesha ರಂಗಯ್ಯ )

No comments: