Sunday, January 11, 2009

ದನಿ ಇರದ ಮೌನ

ಪದೇ ಪದೇ ನಿನ್ನ ನೆನಪಿಸಿಕೊಂಡಾಗ
ಬಿಕ್ಕಳಿಸಿ ಅಳುತಿದೆ ಮನಸು
ಯಾರದೋ ದನಿಯ ಕೇಳಿ
ತಿರುಗಿ ನೋಡುತಿದೆ ಹೃದಯ
ನೀ ಸನಿಹ ಬಂದಿಲ್ಲವೆಂದು ತಿಳಿದು
ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು

ಪ್ರೀತಿಯು ಹೃದಯದಲ್ಲಿ ಬಂದಿಯಾಗಿದೆ
ಯಾತನೆಯ ಅನುಭವಿಸದೆ ನರಳುತ್ತಿದೆ
ಬಿಡುಗಡೆಗಾಗಿ ನಿನಗಾಗಿ ದಾರಿ ಕಾಯುತ್ತಿದೆ
ನಾನು ಪ್ರೀತಿ ಪಡೆಯಲು ಕಾದು ಕುಳಿತಿರುವ ಪರಾವಲಂಬಿ
ನನ್ನಷ್ಟಕ್ಕೆ ನಾನು ದುಃಖವ ನುಂಗುವ ಸ್ವಾವಲಂಬಿ

ನೀನಿಲ್ಲದ ನೋವಿನ ಅಲೆಗಳು ಬಂದೆರಗಿ ಅಪ್ಪಳಿಸುತ್ತಿವೆ
ನೀನಾಡಿದ ಸವಿ ಮಾತುಗಳು ಎದೆಯಲ್ಲಿ ಪ್ರತಿದ್ವನಿಸುತ್ತಿವೆ
ನನ್ನ ಮೌನದೊಂದಿಗೆ ಸೇರಿ ವಿರಹದ ಹಾಡಗಿವೆ

- Vರ ( Venkatesha ರಂಗಯ್ಯ )

No comments: