Monday, September 15, 2008
ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???
ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )
Thursday, September 11, 2008
ರಂಗೋಲಿ ನಾಯಕಿ
ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ
ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ
ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ
ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ
ಕಾಣುತಿಹಳು ಅತಿಸುಂದರ ಅಲಂಕಾರಗಳೇ ಇಲ್ಲದಂತೆ
ಕಣ್ಣ್ ರೆಪ್ಪೆಗಳು ಏನನ್ನೋ ಸನ್ನೆ ಮಾಡುತ್ತಿವೆ ಅವಳಿಗೆ ಅರಿವಿಲ್ಲದಂತೆ
ಅವಳ ಕಣ್ಣುಗಳಿಗೆ ಸೋತುಹೋಗಿ ನಾ ಬಯಸುತಿರುವೆ ಅವಳ ಜೊತೆ
-Vರ ( Venkatesha ರಂಗಯ್ಯ )
Wednesday, September 10, 2008
ಮುಂಗಾರು ಮಿಂಚು
ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ
ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ
ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು
ಪ್ರತಿಯೊಂದು ಹನಿ ಇಂದು ಹೇಳುತಿದೆ ಮಾತೊಂದು
ಬಯಸುತಿದೆ ಮನಸಿಂದು ನೀ ಸನಿಹ ಬೇಕೆಂದು
ನನ್ನ ಹೃದಯವನು ಕದ್ದೆ ಜೊತೆಯಲ್ಲೇ ನಿದ್ದೆಯನು ಕದ್ದೆ
ನಿನ್ನ ನೋಡಲಾರದೆ ಮುಚ್ಚಲೊಪ್ಪವು ಕಣ್ಣುಗಳು
ಕಾರ್ಮೋಡ ಧರೆಗಿಳಿಯಲು ಕಾದಿರುವಂತೆ
ತುದಿಗಾಲಲ್ಲಿ ನಿಂತು ನಿನಗಾಗಿ ನಾ ಕಾಯುತಿರುವೆ.
-Vರ ( Venkatesha ರಂಗಯ್ಯ )
Tuesday, September 9, 2008
ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?
ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )
ನಟಸಾರ್ವಭೌಮನಿಗೆ ನಮಸ್ಕಾರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ
ಹಾಡಿ ಹರಡಿದರು ಕನ್ನಡದ ಕಂಪನ್ನು
ಬೆಳೆಸಿದರು ಮುಗಿಲೆತ್ತರಕೆ ಕನ್ನಡವನ್ನು
ಗಳಿಸಿದರು ಈ ನಾಡ ಜನರ ಪ್ರೀತಿಯನ್ನು
ದೀಪ ಹಾರಿ ಹೋಯಿತಾದರೂ ಕೊಟ್ಟ ಬೆಳಕು ನಿರಂತರ
ಜನ ಮಾನಸದಲ್ಲಿ ರಾಜಣ್ಣ ಎಂದೆಂದೂ ಅಜರಾಮರ
-Vರ ( Venkatesha ರಂಗಯ್ಯ )
ಪ್ರೀತಿಯ ಫಿಲಾಸಫಿ
ನಾವು ಈ ಜಗತ್ತಿನಲ್ಲಿ ಎಲ್ಲವನ್ನು ಪ್ರೀತಿಸ್ತೀವಿ. ಹಾಕ್ಕೊಳ್ಳೋ ಬಟ್ಟೇನ ಪ್ರೀತಿಸ್ತೀವಿ, ತಲೆ ಬಾಚಿಕೊಳ್ತಾ ಕನ್ನಡಿಯಲ್ಲಿ ಕಾಣೋ ನಮ್ಮ ಬಿಂಬನ ಪ್ರೀತಿಸ್ತೀವಿ. ನಮ್ಮ ಬಿಂಬದ ಪಕ್ಕ ಒಬ್ಬಳು ಸುಂದರ ಹುಡುಗಿಯನ್ನ ಕಲ್ಪಿಸಿಕೊಂಡು ಅವಳನ್ನ ಪ್ರೀತಿಸ್ತೀನಿ. ನಾವು ಏನನ್ನಾದರೂ ನಿಜವಾಗ್ಲೂ ಪ್ರೀತಿಸಿದರೆ ಅದು ನಮ್ಮದು ಆಗುತ್ತೆ ಅಂಥ ಯಾರೋ ಹೇಳ್ತಿದ್ರು. ಅದು ಎಷ್ಟು ನಿಜ ಗೊತ್ತ.
ಪುಸ್ತಕನ ಪ್ರೀತಿ ಮಾಡಿದಾಗ ವಿದ್ಯೆ ನಮ್ಮದಾಗುತ್ತೆ , ಕೆಲಸಾನ ಪ್ರೀತಿ ಮಾಡಿದಾಗ ಯಶಸ್ಸು ನಮ್ಮದಾಗುತ್ತೆ , ನಮ್ಮನ್ನು ನಾವು ಪ್ರೀತಿಸಿದಾಗ ಜಗತ್ತು ನಮ್ಮದಾಗುತ್ತೆ.
ನಾವು ಪ್ರೀತಿ ಮಾಡೋದನ್ನ ನಿಲ್ಲಿಸಿದಾಗ, ನಮ್ಮ ಜೀವ ಕೂಡ ನಮ್ಮ ಜೊತೆ ಇರದಲೇ ಹೊರಟು ಹೋಗುತ್ತೆ. ಅದಕ್ಕೆ ಹೇಳೋದು ಜೀವನದಲ್ಲಿ ಏನನ್ನಾದರೂ ಬಿಡು, ಪ್ರೀತಿ ಮಾಡೋದನ್ನ ಮಾತ್ರ ಬಿಡಬೇಡ.
ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )
Thursday, September 4, 2008
ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ. ಅಂಥ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ನಾನು ಒಬ್ಬ ಕಣ್ರೀ. ಇಷ್ಟೆಲ್ಲಾ ಟಿಪ್ಪಣಿನ ಇವನು ಏನಕ್ಕೆ ಬರೀತಾ ಇದಾನೆ ಅಂಥ ನಿಮಗೆ ಅನ್ನಿಸ್ತ ಇರಬಹುದು. ಈಗ ವಿಷಯಕ್ಕೆ ಬರ್ತೀನಿ.
ನನಗೆ ಒಬ್ಬಳು ಆತ್ಮೀಯ ಗೆಳತಿ ಇದ್ದಳು. ಪ್ರತಿ ದಿನ ಇಬ್ಬರು ಫೋನ್ ನಲ್ಲಿ ಕಷ್ಟ ಸುಖ ಮಾತಡ್ಕೊಳ್ತಾ ಇದ್ವಿ. ಪ್ರತಿ ದಿನ ನಾನೇ ಅವಳಿಗೆ ಫೋನ್ ಮಾಡ್ತಾ ಇದ್ದೆ. ನಾನು ಮಾಡ್ಲಿಲ್ಲ ಅಂದ್ರೆ ಕಾಯೋ ಅಷ್ಟು ತಾಳ್ಮೆ ಕೂಡ ಅವಳಲ್ಲಿತ್ತು. ಒಂದ್ ಸಲ ನನಗೆ ಆಫೀಸ್ನಲ್ಲಿ ತುಂಬ ಕೆಲಸ ಇತ್ತು. ಒಂದು ನಾಲ್ಕೈದು ದಿವಸ ನನ್ನನ್ನ ನಾನೇ ಮರೆಯೋ ಅಷ್ಟು ವಿಪರೀತ ಕೆಲಸ ಇತ್ತು. ಊಟ , ತಿಂಡಿ, ನಿದ್ದೆಯ ಕಡೆಗೆ ಗಮನವಿರದಷ್ಟು ಕೆಲಸದಲ್ಲಿ ಏಕಾಗ್ರತೆ!!!. ಈ ಸಮಯದಲ್ಲಿ ನನ್ನ ಆತ್ಮೀಯ ಗೆಳತಿ ಒಬ್ಬಳಿಗೆ ಫೋನ್ ಮಾಡ್ಲಿಕ್ಕೆ ಆಗಿರಲಿಲ್ಲ. ಅವಳಿಗೆ ಕಾದು ಕಾದು ಸಾಕಾಗಿ, ಅವಳೇ ನನಗೆ ಫೋನ್ ಮಾಡಿದ್ಲು . ನಾನು ಫೋನ್ ತಗೊಳ್ತಿದ್ದ ಹಾಗೆ ನಿನದೆ ನೆನಪು ದಿನವು ಮನದಲ್ಲಿ ಅಂಥ ಹಳೆ ಕನ್ನಡ ಹಾಡು ಹೇಳೋಕೆ ಶುರು ಮಾಡಿದ್ಲು. ನಾನು ಏನಕ್ಕೆ ಈ ಹಾಡು ಹೇಳ್ತಿದಿಯ ಅಂಥ ಕೇಳಿದೆ. ಅದಕ್ಕೆ ತಕ್ಷಣ ಅವಳು ಕೋಪದ ದನಿಯಲ್ಲಿ ನನ್ನ ನೆನಪು ನಿನಗೆ ಬರೋದೇ ಇಲ್ಲವಾ ? ಅಂಥ ಕೇಳಿದ್ಲು. ಅವಳ ಆ ಪ್ರಶ್ನೆ ನನ್ನ ಮನಸಿಗೆ ಎಷ್ಟು ನಾಟಿತು ಅಂದ್ರೆ , ನಾನು ತುಂಬ ಭಾವುಕನಾಗಿ ಹೇಳಿದೆ ನನ್ನ ಕಣ್ಣಲ್ಲಿ ನೀರು ಬತ್ತಿ ಹೋಗೋ ವರೆಗೂ ನಿನ್ನ ಮರೆಯೋದಿಲ್ಲ . ಆಗ ಅವಳಿಗೆ ಆದ ಆನಂದ ಅಷ್ಟಿಷ್ಟಲ್ಲ . ಇಂಥ ಭಾವನೆಗಳೇ ಅಲ್ಲವೇ ನಮ್ಮ ಸ್ನೇಹಾನ ಬಲ ಪಡಿಸೋದು , ನಮ್ಮವರು ನಮ್ಮೊಂದಿಗೆ ಸದಾ ಇರೋ ಹಾಗೆ ಮಾಡೋದು .
ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )