ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ. ಅಂಥ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ನಾನು ಒಬ್ಬ ಕಣ್ರೀ. ಇಷ್ಟೆಲ್ಲಾ ಟಿಪ್ಪಣಿನ ಇವನು ಏನಕ್ಕೆ ಬರೀತಾ ಇದಾನೆ ಅಂಥ ನಿಮಗೆ ಅನ್ನಿಸ್ತ ಇರಬಹುದು. ಈಗ ವಿಷಯಕ್ಕೆ ಬರ್ತೀನಿ.
ನನಗೆ ಒಬ್ಬಳು ಆತ್ಮೀಯ ಗೆಳತಿ ಇದ್ದಳು. ಪ್ರತಿ ದಿನ ಇಬ್ಬರು ಫೋನ್ ನಲ್ಲಿ ಕಷ್ಟ ಸುಖ ಮಾತಡ್ಕೊಳ್ತಾ ಇದ್ವಿ. ಪ್ರತಿ ದಿನ ನಾನೇ ಅವಳಿಗೆ ಫೋನ್ ಮಾಡ್ತಾ ಇದ್ದೆ. ನಾನು ಮಾಡ್ಲಿಲ್ಲ ಅಂದ್ರೆ ಕಾಯೋ ಅಷ್ಟು ತಾಳ್ಮೆ ಕೂಡ ಅವಳಲ್ಲಿತ್ತು. ಒಂದ್ ಸಲ ನನಗೆ ಆಫೀಸ್ನಲ್ಲಿ ತುಂಬ ಕೆಲಸ ಇತ್ತು. ಒಂದು ನಾಲ್ಕೈದು ದಿವಸ ನನ್ನನ್ನ ನಾನೇ ಮರೆಯೋ ಅಷ್ಟು ವಿಪರೀತ ಕೆಲಸ ಇತ್ತು. ಊಟ , ತಿಂಡಿ, ನಿದ್ದೆಯ ಕಡೆಗೆ ಗಮನವಿರದಷ್ಟು ಕೆಲಸದಲ್ಲಿ ಏಕಾಗ್ರತೆ!!!. ಈ ಸಮಯದಲ್ಲಿ ನನ್ನ ಆತ್ಮೀಯ ಗೆಳತಿ ಒಬ್ಬಳಿಗೆ ಫೋನ್ ಮಾಡ್ಲಿಕ್ಕೆ ಆಗಿರಲಿಲ್ಲ. ಅವಳಿಗೆ ಕಾದು ಕಾದು ಸಾಕಾಗಿ, ಅವಳೇ ನನಗೆ ಫೋನ್ ಮಾಡಿದ್ಲು . ನಾನು ಫೋನ್ ತಗೊಳ್ತಿದ್ದ ಹಾಗೆ ನಿನದೆ ನೆನಪು ದಿನವು ಮನದಲ್ಲಿ ಅಂಥ ಹಳೆ ಕನ್ನಡ ಹಾಡು ಹೇಳೋಕೆ ಶುರು ಮಾಡಿದ್ಲು. ನಾನು ಏನಕ್ಕೆ ಈ ಹಾಡು ಹೇಳ್ತಿದಿಯ ಅಂಥ ಕೇಳಿದೆ. ಅದಕ್ಕೆ ತಕ್ಷಣ ಅವಳು ಕೋಪದ ದನಿಯಲ್ಲಿ ನನ್ನ ನೆನಪು ನಿನಗೆ ಬರೋದೇ ಇಲ್ಲವಾ ? ಅಂಥ ಕೇಳಿದ್ಲು. ಅವಳ ಆ ಪ್ರಶ್ನೆ ನನ್ನ ಮನಸಿಗೆ ಎಷ್ಟು ನಾಟಿತು ಅಂದ್ರೆ , ನಾನು ತುಂಬ ಭಾವುಕನಾಗಿ ಹೇಳಿದೆ ನನ್ನ ಕಣ್ಣಲ್ಲಿ ನೀರು ಬತ್ತಿ ಹೋಗೋ ವರೆಗೂ ನಿನ್ನ ಮರೆಯೋದಿಲ್ಲ . ಆಗ ಅವಳಿಗೆ ಆದ ಆನಂದ ಅಷ್ಟಿಷ್ಟಲ್ಲ . ಇಂಥ ಭಾವನೆಗಳೇ ಅಲ್ಲವೇ ನಮ್ಮ ಸ್ನೇಹಾನ ಬಲ ಪಡಿಸೋದು , ನಮ್ಮವರು ನಮ್ಮೊಂದಿಗೆ ಸದಾ ಇರೋ ಹಾಗೆ ಮಾಡೋದು .
ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )
No comments:
Post a Comment