ನನ್ನ ಪ್ರೀತಿಯ ಕನ್ನಡಿಗರೇ, ನಮ್ಮ ಭಾಷೆ ಕನ್ನಡದ ಸ್ಥಿತಿ ಗತಿ ಏನಾಗಿದೆ ಅನ್ನೋ ವಿಷಯ ಸುಮಾರು ದಿನದಿಂದ ನನಗೆ ಕಾಡ್ತಾನೆ ಇದೆ. ಮೊನ್ನೆ ಹೀಗೆ ಯೋಚನೆ ಮಾಡ್ತಾ ಇದ್ದೆ. ಆಗ ನನಗೆ ಕಾಡಿದ ಪ್ರಶ್ನೆ " ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ? " . ನಾನು ಇತ್ತೀಚೆಗೆ ಗಮನಿಸ್ತಾ ಇರೋದು ಏನಂದ್ರೆ ಮಕ್ಕಳು ಹಿಂದಿ ಹಾಡಿಗೆ ನೃತ್ಯ ಮಾಡ್ತಾರೆ ಇಲ್ಲ ದೊಡ್ಡವರು ಹಿಂದಿ ಹಾಡುಗಳನ್ನ ಹಾಡ್ತಾರೆ. ಯಾಕ್ ಸ್ವಾಮಿ ಕನ್ನಡದಲ್ಲಿ ಚೆನ್ನಾಗಿರೋ ಹಾಡುಗಳು ನಿಮಗೆ ಸಿಗೊದಿಲ್ವೆ. ಅರ್ . ಏನ್ . ಜಯಗೋಪಾಲ್ , ಚಿ. ಉದಯಶಂಕರ್, ವಿಜಯನಾರಸಿಂಹ ಅಂಥವರು ಎಷ್ಟು ಚೆನ್ನಾಗಿ ಒಳ್ಳೆ ಹಾಡುಗಳನ್ನ ಬರೆದಿದ್ದಾರೆ. ನಮ್ಮ ಹಾಡುಗಳನ್ನ ಹಾಡೋದು ಬಿಟ್ಟು ನಿಮಗೆ ಹಿಂದಿ ಹಾಡೇ ಆಗಬೇಕೆ ಹಾಡೋದಿಕ್ಕೆ, ನಿಮ್ಮ ಪ್ರತಿಭೆನಾ ತೋರಿಸೋದಿಕ್ಕೆ. ರಿಯಾಲಿಟಿ ಶೋ ಕಾರ್ಯಕ್ರಮದ ಇನ್ನೊಂದು ವಿಶೇಷ ಏನಂದ್ರೆ ಕಾರ್ಯಕ್ರಮ ಶುರು ಆಗೋದೇ ಆಂಗ್ಲ ಆಮಂತ್ರಣ ವಾಕ್ಯದಿಂದ. ಹಾಡು ಹೇಳಿದವರಿಗೆ, ನೃತ್ಯ ಮಾಡಿದವರಿಗೆ ಪ್ರಶಂಸೆ ಕೂಡ ಸಿಗೋದು ಇಂಗ್ಲಿಷ್ನಲ್ಲೇ . ನಮ್ಮ ಜಡ್ಜಸ್ಗಳೆಲ್ಲ ಕನ್ನಡ ಚಿತ್ರರಂಗದ ಅತಿರತ ಮಹಾರತರೆ. ನಿಮಗೆ ನಾನು ಕೇಳೋದು ಒಂದೇ ಪ್ರಶ್ನೆ , ಕನ್ನಡದಲ್ಲಿ ಮಾತಾಡಿದ್ರೆ ನಿಮಗೆ ಅವಮಾನ ಆಗುತ್ತ. ಟಿವಿ ಸಂದರ್ಶನದಲ್ಲಿ ಕೂಡ ನಿಮ್ಮ ಚಿತ್ರಗಳ ಬಗ್ಗೆ ಮಾತಾಡ್ಬೇಕಾದ್ರೆ ಇಂಗ್ಲಿಷ್ ನಲ್ಲಿ ಮಾತಾಡಿದ್ರೆ ಸತ್ಯವಾಗಲು ಕನ್ನಡಿಗರು ನಿಮ್ಮ ಚಿತ್ರನ ನೋಡಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಗೋದಕ್ಕೆ ನಾವೆಲ್ಲ ಒಗ್ಗಟ್ಟಾಗಿ ದುಡಿತ ಇರಬೇಕಾದ್ರೆ, ನೀವು ಹೀಗೆ ಮಾಡ್ತಾ ಇರೋದು ಸರೀನಾ???
ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )
Subscribe to:
Post Comments (Atom)
No comments:
Post a Comment