Thursday, July 31, 2008

ಸಖತ್ ಸುಂದರಿ

ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ
ಹುಡುಗಿ ಸಖತ್ ಸುಂದರಿ
ನನಗೆ ರಾಖಿ ಕಟ್ಟಿದಾಗಿನಿಂದ
ಅವಳು ನನ್ನ ಸಹೋದರಿ !!!


-Vರ ( Venkatesha ರಂಗಯ್ಯ )

Thursday, July 24, 2008

ಬೆಚ್ಚಗೆ ನಿನ್ನ ನೆನಪು

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು

ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ
ನಿನ್ನ ಜೊತೆ ನಾ ಕಳೆದ ಕಾಲ ಬಲು ಮಧುರ

-Vರ ( Venkatesha ರಂಗಯ್ಯ )

Wednesday, July 16, 2008

'ಕರೆ'ನ್ಸಿ

ಬರಲಿಲ್ಲ ನನ್ನವಳಿಂದ ಕರೆ
ಬರಲಿಲ್ಲ ನನ್ನವಳಿಂದ ಕರೆ
ಕಾರಣ ಅವಳ ಮೊಬೈಲಿನಲ್ಲಿ ಇಲ್ಲ 'ಕರೆ'ನ್ಸಿ !!!

-Vರ ( Venkatesha ರಂಗಯ್ಯ )

Friday, July 11, 2008

ಯಾಕೆ ಹೀಗಾಯ್ತು ???

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ
ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ
ಪದಗಳು ಹುಟ್ಟುವುದು ನಿನ್ನ ಅಂದದಿಂದ
ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ ಕ್ಷಣದಿಂದ !!!

-Vರ ( Venkatesha ರಂಗಯ್ಯ )

ಮಲ್ಲಿಗೆ ಪರಿಮಳ

ನೀ ಮುಡಿದ ಮಲ್ಲಿಗೆಯ ಪರಿಮಳ
ಇಂದೇಕೋ ನನ್ನೆದೆಯಲ್ಲಿ ತಳಮಳ
ಬಾಡದಿರಲಿ ನೀ ಮುಡಿದ ಮಲ್ಲಿಗೆ
ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!!

-Vರ ( Venkatesha ರಂಗಯ್ಯ )

ಆಸೆ

ನೀನೊಂದು ಕಡಲು, ನಾನೊಂದು ನದಿ
ನಿನ್ನ ಸೇರುವುದೇ ನನ್ನ ಗುರಿ
ಅದಕ್ಕಾಗಿ ಹುಡುಕುತಿಹೆ ಹರಿಯುವ ದಾರಿ
ನೀ ಈಗ ಎಲ್ಲಿರುವೆ ನಾರಿ
ನಾ ಬರೋದು ಲೇಟಾದರೆ ಸಾರಿ!!!

-Vರ ( Venkatesha ರಂಗಯ್ಯ )

ಕನಸಿನ ಮಾತುಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ
ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ
ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ
ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ

ನಾ ನಿನ್ನ ಕನಸಿಗೆ ಬಂದು ಹೋದರೆ
ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ

ಕನಸಿನ ಕನ್ನಡಿಯಲ್ಲಿ ಕಾಣುತಿದೆ ನಿನ್ನದೇ ಮುಖವು
ಮನಸಿನ ಮುಖ ಪುಟದಲ್ಲಿ ಕುಳಿತಿದೆ ನಿನ್ನದೇ ಚಿತ್ರವು
ಬಾಳಿನ ಮುನ್ನುಡಿ ತುಂಬ ನಿನ್ನದೇ ಹೆಸರು
ನಿನ್ನಿಂದಲೇ ನನ್ನ ಬಾಳು ಹಸಿರು

-Vರ ( Venkatesha ರಂಗಯ್ಯ )

ಬಿಟ್ಟು ಹೋದವಳಿಗಾಗಿ

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ
ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ
ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ
ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ

ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ
ಬಯಸುವೆ ಅವಲಿಗಿರಲೆಂದು ಸದಾ ಭೋಗ
ಚಡಪಡಿಸುತ್ತಿರುವ ಮನಕೆ ಬೇಕು ಒಲವಿನ ಸಹಯೋಗ
ಕಾಯುತಿರುವುದು ಹೃದಯ ಸ್ವೀಕರಿಸಲು ಪ್ರೀತಿಯ ವಿನಿಯೋಗ

-Vರ ( Venkatesha ರಂಗಯ್ಯ )

ಮಿಂಚಿನ ಬಳ್ಳಿ

ನಿನ್ನ ಕುಡಿನೋಟವು ಇಡುತಿದೆ ಕಚಗುಳಿ
ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ
ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ
ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!!

-Vರ ( Venkatesha ರಂಗಯ್ಯ )

Wednesday, July 9, 2008

ಜಣ ಜಣ ಕಾಂಚಾಣ

ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ
ಸಾದಿಸೋಕೆ ಪಡಲೇಬೇಕು ಕಷ್ಟ
ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ
ದುಡಿಯುವವನ ಬಳಿ ಮೆರೆಯುವುದು ಜಣ ಜಣ

-Vರ ( Venkatesha ರಂಗಯ್ಯ )

ಸೊಂಟದ ವಿಷಯ

ತಳುಕು ಬಳುಕು ಸೊಂಟ
ನಾನು ಅದರ ನೆಂಟ
ಹಿಡಕೊಂಡೇ ಅವಳ ಸೊಂಟ
ಜನವೆಲ್ಲ ಸೇರಿ ಮಾಡಿದ್ರು ನನ್ನ ಕುಂಟ !!!

-Vರ ( Venkatesha ರಂಗಯ್ಯ )

ಸ್ಕೂಟಿ ಬ್ಯೂಟಿ

ಬಳ್ಳಿಯಲ್ಲಿ ಹೂ ಕಂಡು ದುಂಬಿ ಹಾರಿತು
ಕಡಲು ಸೇರೋ ದಾರಿ ಕಂಡು ನದಿ ಹರಿಯಿತು
ಬರಡು ಭೂಮಿ ತಣಿಸಲೆಂದು ಮಳೆ ಸುರಿಯಿತು
ಸ್ಕೂಟಿ ಬ್ಯೂಟಿ ಕಂಡು ಹೃದಯ ಹಾಡಿತು!!!

-Vರ ( Venkatesha ರಂಗಯ್ಯ )

ಬಣ್ಣದ ಮಹಿಮೆ

ಅರಿಶಿನ ಚೆಂದನದಂತೆ ಹೊಳೆಯುತ್ತಿದೆ ನಿನ್ನ ಮೈ ಬಣ್ಣ
ನಿನ್ನ ಕಂಡಾಗಲೆಲ್ಲ ನನ್ನ ಮೈ ತುಂಬ ಚುಮು ಚುಮು ಕಂಪನ
ನಿನ್ನನ್ನು ಕಂಡರೆ ಕಣ್ಣು ಹೊಡೆಯದೆ ಇರುವನೇ ಕಾಮಣ್ಣ !!!

-Vರ ( Venkatesha ರಂಗಯ್ಯ )

ನಿನ್ನಿಂದ

ಕತ್ತಲೆ ತುಂಬಿರುವ ಬಾಳಲ್ಲಿ
ನೀ ಬಂದೆ ಬೆಳಕು ಚೆಲ್ಲಿ
ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ
ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !!

-Vರ ( Venkatesha ರಂಗಯ್ಯ )

ಕಾರಣ

ಮೋಡ ಕವಿದ ವಾತಾವರಣ
ಮುಸುಕು ಕವಿದ ಅಂತಃಕರಣ
ಕಳೆದು ಹೋಗಿದೆ ಬಾಳ ಕವಿತೆಯ ಚರಣ
ಹುಡುಕಬೇಕಿದೆ ಇದಕೆಲ್ಲ ಕಾರಣ!!

-Vರ ( Venkatesha ರಂಗಯ್ಯ )

Tuesday, July 8, 2008

ಕಾಲಿಂಗ್ ಬಿಲ್

ನನ್ನ ಮೊಬೈಲ್ ಕನೆಕ್ಷನ್ ಏರ್ ಟೆಲ್

ನಿಂದು ಯಾವುದು ಪ್ಲೀಸ್ ಟೆಲ್

ಒಂದು ರೂಪಾಯಿ ಹೋಗುತ್ತೆ ಮಾಡಿದ್ರೆ ಒಂದು ಕಾಲ್

ನಿರಂತರವಾಗಿ ಫೋನ್ ಮಾಡ್ತಿದ್ರೆ ಬರುತ್ತೆ ಜಾಸ್ತಿ ಬಿಲ್

ನಾನು ಫೋನ್ ಮಾಡಲ್ಲ ಅಂಥ ಆಗಬೇಡ ಡಲ್

ತಪ್ಪದೆ ದಿನ ಎಸ್ಸೆಮ್ಮೆಸ್ ಮಾಡ್ತೀನಿ ಮೇರಾ ದಿಲ್ !!!

-Vರ ( Venkatesha ರಂಗಯ್ಯ )

ಕನ್ನಡ ಕನ್ನಡ ಕನ್ನಡ

ನಾ ಕುಡಿಯುವ ಜಲ ಕಾವೇರಿ
ನಾ ಮೆಟ್ಟುವ ನೆಲ ಕರುನಾಡು
ನಾ ಬೆರೆಯುವ ಜನ ಕನ್ನಡಿಗರು
ನನ್ನ ತನು ಮನ ಕಣ ಕಣದಲ್ಲು
ಕನ್ನಡ ಕನ್ನಡ ಕನ್ನಡ

-Vರ ( Venkatesha ರಂಗಯ್ಯ )

ಅನುಪಮ

ಇವಳ ಮುಖ ಹುಣ್ಣಿಮೆ ಚಂದ್ರಮ
ಇವಳ ಮಾತಿನಲ್ಲಿ ಘಮ ಘಮ
ಇವಳು ಸಂಗೀತದಲ್ಲಿ ಸರಿಗಮ
ಇವಳೇ ನನ್ನ ಅನುಪಮ

-Vರ ( Venkatesha ರಂಗಯ್ಯ )

ಮಾಯಾಂಗಿನಿ ಮೋಡಿ

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು
ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು
ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ
ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ
ತೀರಗಳಿಂದಾಚೆಗೆ ಕರೆದುಕೊಂಡು ಹೋಗಲೆಂದೆ ಬಂದಿವುದೆ ಈ ಮಾಯೆ
ಮರುಭೂಮಿಯಂತ ಮನಸಿಗೆ ನೀರೆರೆಯಲು ಬಂದಿರುವಳೇ ಈ ಮಾಯೆ
ಸ್ಥಿರವಾದ ಮನಸನು ವಿಚಲಿತಗೊಳಿಸಿದ ಮಾಯೆ ನೀನು
ಯಾರಿವಳು ಈ ಮಾಯೆ , ಎಲ್ಲಿಂದ ಬಂದಿಹಳು ಈ ಮಾಯೆ
ಕುಳಿತಿರುವವನ ಎಬ್ಬಿಸಿ ನಡೆಸುತಿರುವಳು ಈ ಮಾಯೆ
ಹಸಿವಿಲ್ಲದವನಿಗೆ ಹಸಿವು ತಂದು ಕೊಟ್ಟಳು ಈ ಮಾಯೆ

-Vರ ( Venkatesha ರಂಗಯ್ಯ )





ಮೊದಲ ಹನಿ

ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!

-Vರ ( Venkatesha ರಂಗಯ್ಯ )