Thursday, August 28, 2008

ಸಣ್ಣ ಜೋಕ್

ಒಬ್ಬ ಹುಡುಗ ಸೀರೆ ಅಂಗಡಿಯ ಶೋಕೇಸ್ ನಲ್ಲಿ ಇಟ್ಟಿದ್ದ ಗೊಂಬೆನ ದುರುಗುಟ್ಟಿಕೊಂಡು ನೋಡ್ತಾ ಇದ್ದ. ಅದನ್ನ ಕಂಡ ಅಂಗಡಿ ಮಾಲೀಕ, "ಯಾಕಪ್ಪಾ ಆ ಗೊಂಬೆನ ಹಾಗೆ ನೋಡ್ತಾ ಇದ್ದೀಯ?" ಅಂಥ ಕೇಳಿದ.
ಅದಕ್ಕೆ ಆ ಹುಡುಗ "ಗೊಂಬೆ ರವಿಕೆ ಹಾಕಿಲ್ಲ ರೀ, ಅದಕ್ಕೆ ನೋಡ್ತಾ ಇದೀನಿ ಅಂಥ ಹೇಳಿದ" .

ನೀತಿ : ಮಕ್ಕಳು ಗೊಂಬೆ ಜೊತೆ ಆಟ ಆಡ್ತಾ ದೊಡ್ಡವರು ಆಗ್ತಾರೆ. ಹಾಗಾಗಿ ನಾವು ಮಾಡೋ ಸಣ್ಣ ತಪ್ಪುಗಳು ಮಕ್ಕಳನ್ನ ತಪ್ಪು ದಾರಿಗೆ ಎಳೆಯೋದು ಬೇಡ ಅಲ್ವಾ.

-Vರ ( Venkatesha ರಂಗಯ್ಯ )

Wednesday, August 27, 2008

ಹಸಿ ಹಸಿ ಪ್ರೀತಿ

ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.

-Vರ ( Venkatesha ರಂಗಯ್ಯ )

ಹುಡುಗರ ಆಟ

ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಾಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು

-Vರ ( Venkatesha ರಂಗಯ್ಯ )

Tuesday, August 26, 2008

ಕನ್ನಡಕ್ಕಾಗಿ

ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ
ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ
ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ
ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ.

-Vರ ( Venkatesha ರಂಗಯ್ಯ )

ಎಷ್ಟು ದಿನದ ನಂತರ

ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ
ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ
ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ
ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ

ಎಷ್ಟು ದಿನದ ನಂತರ ಕಂಡೆ ನಿನ್ನ ಮುಖ
ಕಾದು ಕಾದು ಬಳಲಿ ಬೆಂಡಾಗಿದ್ದ ನಿನ್ನ ಸಖ
ನಿನ್ನೊಂದಿಗೆ ಮತ್ತೆ ಮರಳಿ ಬಂದಿದೆ ಸುಖ
ಇನ್ನು ಹೇಗೆ ತಾನೆ ನನ್ನ ಬಳಿ ಸುಳಿದಾಡುತ್ತೆ ದುಃಖ

ಎಷ್ಟು ದಿನದ ನಂತರ ನಕ್ಕಿತು ನನ್ನ ಹೃದಯ
ನಿನಗಾಗಿ ಮೀಸಲು ನನ್ನ ಪೂರ್ತಿ ಸಮಯ
ಜಗಳ ಬೇಜಾರು ನೋವು ಎಲ್ಲ ಮಾಯಾ
ನಲಿವು ಒಲವು ನಮಗಿರಲೆಂದು ಸದಾಶಯ

-Vರ ( Venkatesha ರಂಗಯ್ಯ )

Thursday, August 21, 2008

ಗೆಳೆಯನ ಮನಸ್ಸು ಹಾಲಿನಂತಿದ್ದರೆ...

ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇವರು ಹಾಲು ಇದ್ದ ಹಾಗೆ. positive ಆಗಿ ಯೋಚನೆ ಮಾಡೋರು ಯಾವತ್ತು negative thinking ಇರೋ ಮನುಷ್ಯರ ಸಹವಾಸ ಮಾಡಬಾರದು ಕಣ್ರೀ....ಅಪ್ಪಿ ತಪ್ಪಿ ಸಹವಾಸ ಮಾಡಿದ್ರು ಅಂದ್ರೆ ಅದು ಹಾಲು ಹುಳಿ ಸಂಬಂಧ ಥರ ಇರುತ್ತೆ ಹೊರತು ಹಾಲು ಜೇನು ಸಂಬಂಧ ಹಾಗಿರಲ್ಲ. negative thinking ಜನ ಗೆಲ್ಲೋಕೆ ಸಾದ್ಯನೇ ಇಲ್ಲ ಅಂಥ ಜೀವನ ಮಾಡ್ತಾರೆ. ಆದರೆ positive thinking ಇರೋರು ಯಾವತ್ತು ಸೋಲಲೆಬಾರದು ಅನ್ನೋ ಹಠವಾದಿಗಳು ಆಗಿರ್ತಾರೆ...ಇವರು ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸ್ತಾರೆ, ಶ್ರದ್ದೆ ಇಂದ ಕೆಲಸ ಮಾಡ್ತಾರೆ. ಇವರ ನಡೆ, ನುಡಿ, ನೋಟ ಪ್ರತಿಯೊಂದರಲ್ಲೂ ವಿನಯ ಅಡಗಿರುತ್ತೆ...ಇದೆ ಕಾರಣಕ್ಕೆ ಅಲ್ವೇ ನಮಗೆ ಅಬ್ದುಲ್ ಕಲಾಮ್ ಅವರು ನಮಗೆ ಇಷ್ಟ ಆಗೋದು. ಕೊನೆದಾಗಿ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ, ನಾವು ಯಾವಾಗಲು ಒಳ್ಳೆತನವನ್ನ ರೂಡಿ ಮಾಡ್ಕೊಬೇಕು, ಕೆಟ್ಟತನದ ಅರಿವು ಸದಾ ನಮಗಿರಬೇಕು....ಹಾಗಿದ್ದಾಗ ಮಾತ್ರ ನಾವು, ನಮ್ಮ ಜನ, ನಮ್ಮ ದೇಶ ಚೆನ್ನಾಗಿರುತ್ತೆ ...

ಇಂತಿ ನಿಮ್ಮ ಪ್ರೀತಿಯ ಗೆಳೆಯ
-Vರ ( Venkatesha ರಂಗಯ್ಯ )

ಕನ್ನಡ ತಾಯಿಗೆ ನಮನ

ಎದ್ದೇಳಿ ಕನ್ನಡಿಗರೆ ಎದ್ದೇಳಿ
ಹರಡಲು ಕರುನಾಡ ಕಂಪನ್ನು
ಹಾಡಲು ಕನ್ನಡದ ಹಾಡನ್ನು

ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ
ಊರುಗಳು ಸಾವಿರಾರು ಭಾವನೆಗಳು ನೂರಾರು
ನಮ್ಮ ಭಾಷೆ ಒಂದೆ ಕನ್ನಡ

ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ಎಲ್ಲರು ಸೇರಿ ಮೊಳಗಿಸೋಣ ಕರ್ನಾಟಕದ ಕಹಳೆಯನ್ನು
ಒಟ್ಟಾಗಿ ಮೆರೆಸೋಣ ಕರ್ನಾಟಕ ಕೀರ್ತಿಯನ್ನು

ಕೆಂಪೇಗೌಡರು ಕಟ್ಟಿದರು ಬೆಂಗಳೂರು
ರಾಜ ಮಹಾರಾಜರು ಆಳಿದರು ಮೈಸೂರು
ಶಿಲ್ಪಕಲೆಗಳಿಗೆ ಹೆಸರಾದವು ಹಳೇಬೀಡು ಬೇಲೂರು

ಕಾವೇರಿ ಹುಟ್ಟಿ ಹರಿಯುತಿಹಳು ಕೊಡಗಿನಲ್ಲಿ
ಶರಾವತಿ ದುಮ್ಮುಕ್ಕಿ ಹರಿಯುತಿಹಳು ಜೋಗದಲ್ಲಿ
ಶ್ರೇಷ್ಠ ಕವಿಗಳ ಕವಿಸಾರ ಹರಿಯಿತು ಕರ್ನಾಟಕದಲ್ಲಿ

ಬನ್ನಿ ಕನ್ನಡಿಗರೆ ಒಗ್ಗಟ್ಟಾಗಿ ಬನ್ನಿ
ಕನ್ನಡ ನಾಡು ನುಡಿಯ ಉಳಿಸೋಣ ಬನ್ನಿ
ಕನ್ನಡಾಂಬೆಯ ಆಶೀರ್ವಾದ ಪಡೆಯೋಣ ಬನ್ನಿ

-Vರ ( Venkatesha ರಂಗಯ್ಯ )

Wednesday, August 13, 2008

ದಪ್ಪ ಸುಂದರಿ

ಎಷ್ಟು ದಪ್ಪ ಈ ಸುಂದರಿ
ಎಷ್ಟು ದಪ್ಪ ಈ ಸುಂದರಿ
ಇವಳಿಗೆ ಕೂರಲು ಬೇಕು ಎರಡು ಸೀಟು ರೀ !!!

-Vರ ( Venkatesha ರಂಗಯ್ಯ )