Monday, August 31, 2009

ನಿನ್ನಿಂದ ಎಲ್ಲ ನಿನ್ನಿಂದ

ಬದುಕು ಬಂಗಾರವಾಯಿತು
ಬಾಳು ಬೆಳಕಾಯಿತು
ಮನಸು ಹಗುರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕನಸು ನನಸಾಯಿತು
ಉಸಿರು ಸಂಗೀತವಾಯಿತು
ಹೆಸರು ಪ್ರಸಿಧ್ಧ ಹೆಸರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕಣ್ಣು ಕಣ್ಣು ಕಲೆತಾಯಿತು
ಹೃದಯ ಹೃದಯ ಮಿಡಿದಾಯಿತು
ಒಲವು ಬಂದು ಮನಸು ಒಂದಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಭಾವನೆಗಳಿಗೆ ಜೀವ ಬಂದಾಯಿತು
ಕನಸುಗಳಿಗೆ ರೆಕ್ಕೆಪುಕ್ಕ ಬಂದು ಹಾರಾಯಿತು
ಬದುಕಿಗೆ ಪರಿಪೂರ್ಣತೆ ಸಿಕ್ಕಂತಾಯಿತು
ನಿನ್ನಿಂದ ಎಲ್ಲ ನಿನ್ನಿಂದ

- Vರ ( Venkatesha ರಂಗಯ್ಯ )

ಭಾರತ - ನಮ್ಮ ದೇಶ

ಇದೆ ನೋಡು ಭಾರತ ದೇಶ
ದೇಶವ ಮುನ್ನಡೆಸುವ ಪ್ರಜೆಯೇ ಈಶ
ಸಾರುವೆವು ಒಕ್ಕೊರಲಿನಿಂದ ಪ್ರೀತಿ ಸಂದೇಶ
ತೆಗೆಯುವೆವು ಎಲ್ಲರ ಮನಸಿಂದ ಅಸೂಯೆ ದ್ವೇಷ
ಗಾಂಧಿ ಕಟ್ಟಿದ ಗೂಡಿದು ನೆಹರು ಬೆಳೆಸಿದ ನಾಡಿದು
ಶಾಂತಿ ಮಂತ್ರ ಭಾವೈಕ್ಯತೆ ಭಾವನೆ ನಮ್ಮದು
ದೇಶ ಭಾಷೆಯ ಅಭಿಮಾನ ತುಂಬಿರುವ ಉಸಿರು ನಮ್ಮದು
ದೇಶ ಭಕ್ತರೆಲ್ಲ ಸೇರಿ ಹಾಕಿದರು ಭದ್ರ ಬುನಾದಿ
ನಮಗೆಲ್ಲ ದಾರಿ ದೀಪ ಅವರು ತೋರಿದ ಹಾದಿ

-Vರ ( Venkatesha ರಂಗಯ್ಯ )

ಮನಸಾರೆ

ಆಸರೆ ನಿನ್ನಾಸರೆ ಬಯಸಿದೆ ಮನಸಾರೆ
ಉಸಿರೇ ನನ್ನುಸಿರೇ ಕನವರಿಸುತಿದೆ ಕನಸಾರೆ
ಕನಸಿನಲ್ಲಿ ಕಂಡ ಓ ತಾವರೆ
ಮನಸಿಂದಾಗಿದೆ ನಿನ್ನ ಕೈಸೆರೆ

ಪ್ರೀತಿ ಹೂವಿನಲ್ಲಿನ ಮಕರಂದ
ಸವಿಯೋ ಆತುರದಲ್ಲಿನ ಆನಂದ
ಹೇಗೆ ವಿವರಿಸಲಿ ನಾ ಸುಖದಾನಂದ

ಕಣ್ಣಿನ ನೋಟಗಳಲ್ಲಿರುವ ಆತ್ಮೀಯತೆ
ಕಂಡಾಗ ಉಲ್ಬಣಿಸುತ್ತಿದೆ ಭಾವ ತೀವ್ರತೆ
ಕಡಲ ತೀರದ ಅಲೆಗಳ ಒಕ್ಕೊರಲತೆ
ನೋಡುತ ನಲಿಯುತಿದೆ ಪ್ರೀತಿಯ ಲತೆ

- Vರ ( Venkatesha ರಂಗಯ್ಯ )

ತಂಗಾಳಿ ಪ್ರೀತಿ

ತಂಗಾಳಿಯಾಗಿ ಬಂದು ಅಪ್ಪಿಕೋ ಬಾ ಪ್ರೀತಿ
ಮಳೆಬಿಲ್ಲೆಯಾಗಿ ಸುರಿದು ತಣಿಸು ಬಾ ಪ್ರೀತಿ
ಕಣ್ ಮುಚ್ಚಿ ಕೈ ಹಿಡಿದು ದೂರ ತೀರಕೆ ಕರೆದೊಯ್ಯಿ ಬಾ ಪ್ರೀತಿ
ಸೊಗಸಾದ ಹೂದೋಟದಲಿ ಸವಿಗಾನ ಹೇಳು ಬಾ ಪ್ರೀತಿ

ನೀ ನನ್ನ ಅಪ್ಪಿದೊಡೆ ಮೈಮನದಲ್ಲೆಲ್ಲ ಹೊಸ ಪುಳಕ
ನೀ ಹನಿಹನಿಯಾಗಿ ತಣಿಸಿದೊಡೆ ಹೃದಯಕೆ ಪ್ರೀತಿಯ ಜಳಕ
ನೀ ನನ್ನ ಕೈ ಹಿಡಿದು ನಡೆಯುವಾಗ ಏನೋ ಒಂಥರ ನಡುಕ
ನೀ ಹಾಡುವಾಗ ನಿನ್ನೊಂದಿಗೆ ಹಾಡಬೇಕೆಂಬ ತವಕ

ಏನೋ ಒಂಥರ ಹೊಸದು ನನ್ನೊಳಗಿನ ಬದಲಾವಣೆ
ಏಕೋ ಏನೋ ಇದಕ್ಕೆಲ್ಲ ಕಾರಣ ನಾ ಕಾಣೆ
ನಿನದೆ ಮೋಡಿ ಇರಬಹುದೆಂದು ಅನುಮಾನ ಕಣೇ
ನನ್ನೊಳಗಿನ ಈ ಗೊಂದಲಗಳ ಬಗೆಹರಿಸು ಬಾ ಜಾಣೆ

- Vರ ( Venkatesha ರಂಗಯ್ಯ )