Sunday, December 28, 2008

ಜನ್ಮ ಜನ್ಮದ ಗೆಳತಿ

ಟ್ರಿನ್ ಟ್ರಿನ್ ಟ್ರಿನ್ ರಿಂಗಣ ಮೊಳಗಲು
ಆ ಕಡೆ ಇರುವ ನೀವು ಯಾರೆಂದು ನಾ ಕೇಳಲು
ಸಿಹಿಯಾದ ದನಿಯೊಂದು ಅತ್ತಕಡೆಯಿಂದ ಬಂದಿತು
ಸೊಗಸಾದ ಕನಸಿರಬಹುದೆಂದು ಮೊದಲು ನನಗನಿಸಿತು

ನಿಮ್ಮ ಹೆಸರೇನೆಂದು ನಾ ಮತ್ತೆ ಕೇಳಲು
ಅಯ್ಯೋ ತಪ್ಪಾಗಿ ನಿಮಗೆ ಕರೆ ಮಾಡಿದೆ ಎಂದು ದನಿ ನುಡಿಯಿತು
ಆಕಸ್ಮಿಕ ಕರೆಯಿಂದ ಗೆಳತಿಯೊಬ್ಬಳು ಸಿಕ್ಕಳೆಂದು ನನಗನಿಸಿತು

ಅರೆ ಕ್ಷಣ ಮೌನದ ನಂತರ ಒಟ್ಟಿಗೆ ಕೇಳಿದೆವು ಹೆಸರೇನೆಂದು
ಅವಳೆಂದಳು ಲಕ್ಷ್ಮಿ ನಾನೆಂದೆನು ವೆಂಕಟೇಶ

ಒಂದು ಕ್ಷಣ ಅವಳು ಯಾವುದೊ ಜನ್ಮದ ಗೆಳತಿಯೆಂದು ಅನಿಸಿತು
ಮರುಕ್ಷಣ ಸ್ನೇಹದ ಆಹ್ವಾನವ ಮನಸು ಅವಳಿಗೆ ಕಳಿಸಿತು
ತತ್ ಕ್ಷಣ ಮುಗುಳ್ನಗೆಯೊಂದಿಗೆ ಅವಳಿಂದ ಒಪ್ಪಿಗೆ ಬಂದಿತು

ಇಬ್ಬರ ಮೊಗದಲ್ಲಿ ಹೊರಹೊಮ್ಮಿತು ಹರುಷ
ದೇವರಲ್ಲಿ ಬೇಡಿದೆ ಇರಲೆಂದು ಈ ಸ್ನೇಹ ನೂರು ವರುಷ

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

Monday, December 1, 2008

ಒಂಟಿ ಮನಸಿನ ಪಯಣ

ಒಂಟಿ ಮನಸಿಗೆ ಜಂಟಿಯಾಗಲು
ಜೊತೆಗಾರರು ಯಾರು ಇಲ್ಲ
ಮಾತುಗಳು ಬಹಳ ಕೇಳುವವರು ವಿರಳ
ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು

ಅರಿವುಂಟು ಈ ಮನಕೆ ಕೇಳುವ ಕಿವಿಗಳು
ಈ ಜಗದಲ್ಲಿ ಇಲ್ಲ ಎಂದು
ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು

ದುಃಖ ಉಮ್ಮಳಿಸಿದಾಗ ಕಣ್ಣೀರು ಹರಿದಾಗ
ಬತ್ತಿ ಹೋಗುತಿದೆ ತಂತಾನೆ ಒರೆಸುವರು ಇಲ್ಲದಂತಾಗಿ
ಪ್ರಶ್ನೆಯ ಮೇಲೆ ಪ್ರಶ್ನೆಯ ಹಾಕುತಿದೆ
ಯಾರ ಹತ್ತಿರ ದುಖ ಕೊಳ್ಳಲಿ ಎಂದು
ಬೆಟ್ಟದಷ್ಟಿಹುದು ಮನಸಿನ ಕನಸುಗಳು
ಕೊನೆಯೇ ಇಲ್ಲದ ಮುಗಿಲಂತಿಹುದು ಮನಸಿನ ಮಾತುಗಳು

ಬರೆಯುತ್ತೆ ಹಾಡುತ್ತೆ ನಡೆಯುತ್ತೆ ಕುಣಿಯುತ್ತೆ
ತಂಗಾಳಿಯಲ್ಲಿ ತೇಲಾಡುತ್ತೆ ಯಾವಾಗಲು ಒಂಟಿಯಾಗಿರುತ್ತೆ
ಈ ಬಾಳ ಬಂಡಿಯಲಿ ತಾನೊಬ್ಬನೇ
ಪಯಣಿಗನೆಂದು ಅರಿತು ಮತ್ತೆ ಮುನ್ನುಗ್ಗುತ್ತೆ

- Vರ ( Venkatesha ರಂಗಯ್ಯ )