Monday, August 31, 2009

ನಿನ್ನಿಂದ ಎಲ್ಲ ನಿನ್ನಿಂದ

ಬದುಕು ಬಂಗಾರವಾಯಿತು
ಬಾಳು ಬೆಳಕಾಯಿತು
ಮನಸು ಹಗುರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕನಸು ನನಸಾಯಿತು
ಉಸಿರು ಸಂಗೀತವಾಯಿತು
ಹೆಸರು ಪ್ರಸಿಧ್ಧ ಹೆಸರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕಣ್ಣು ಕಣ್ಣು ಕಲೆತಾಯಿತು
ಹೃದಯ ಹೃದಯ ಮಿಡಿದಾಯಿತು
ಒಲವು ಬಂದು ಮನಸು ಒಂದಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಭಾವನೆಗಳಿಗೆ ಜೀವ ಬಂದಾಯಿತು
ಕನಸುಗಳಿಗೆ ರೆಕ್ಕೆಪುಕ್ಕ ಬಂದು ಹಾರಾಯಿತು
ಬದುಕಿಗೆ ಪರಿಪೂರ್ಣತೆ ಸಿಕ್ಕಂತಾಯಿತು
ನಿನ್ನಿಂದ ಎಲ್ಲ ನಿನ್ನಿಂದ

- Vರ ( Venkatesha ರಂಗಯ್ಯ )

ಭಾರತ - ನಮ್ಮ ದೇಶ

ಇದೆ ನೋಡು ಭಾರತ ದೇಶ
ದೇಶವ ಮುನ್ನಡೆಸುವ ಪ್ರಜೆಯೇ ಈಶ
ಸಾರುವೆವು ಒಕ್ಕೊರಲಿನಿಂದ ಪ್ರೀತಿ ಸಂದೇಶ
ತೆಗೆಯುವೆವು ಎಲ್ಲರ ಮನಸಿಂದ ಅಸೂಯೆ ದ್ವೇಷ
ಗಾಂಧಿ ಕಟ್ಟಿದ ಗೂಡಿದು ನೆಹರು ಬೆಳೆಸಿದ ನಾಡಿದು
ಶಾಂತಿ ಮಂತ್ರ ಭಾವೈಕ್ಯತೆ ಭಾವನೆ ನಮ್ಮದು
ದೇಶ ಭಾಷೆಯ ಅಭಿಮಾನ ತುಂಬಿರುವ ಉಸಿರು ನಮ್ಮದು
ದೇಶ ಭಕ್ತರೆಲ್ಲ ಸೇರಿ ಹಾಕಿದರು ಭದ್ರ ಬುನಾದಿ
ನಮಗೆಲ್ಲ ದಾರಿ ದೀಪ ಅವರು ತೋರಿದ ಹಾದಿ

-Vರ ( Venkatesha ರಂಗಯ್ಯ )

ಮನಸಾರೆ

ಆಸರೆ ನಿನ್ನಾಸರೆ ಬಯಸಿದೆ ಮನಸಾರೆ
ಉಸಿರೇ ನನ್ನುಸಿರೇ ಕನವರಿಸುತಿದೆ ಕನಸಾರೆ
ಕನಸಿನಲ್ಲಿ ಕಂಡ ಓ ತಾವರೆ
ಮನಸಿಂದಾಗಿದೆ ನಿನ್ನ ಕೈಸೆರೆ

ಪ್ರೀತಿ ಹೂವಿನಲ್ಲಿನ ಮಕರಂದ
ಸವಿಯೋ ಆತುರದಲ್ಲಿನ ಆನಂದ
ಹೇಗೆ ವಿವರಿಸಲಿ ನಾ ಸುಖದಾನಂದ

ಕಣ್ಣಿನ ನೋಟಗಳಲ್ಲಿರುವ ಆತ್ಮೀಯತೆ
ಕಂಡಾಗ ಉಲ್ಬಣಿಸುತ್ತಿದೆ ಭಾವ ತೀವ್ರತೆ
ಕಡಲ ತೀರದ ಅಲೆಗಳ ಒಕ್ಕೊರಲತೆ
ನೋಡುತ ನಲಿಯುತಿದೆ ಪ್ರೀತಿಯ ಲತೆ

- Vರ ( Venkatesha ರಂಗಯ್ಯ )

ತಂಗಾಳಿ ಪ್ರೀತಿ

ತಂಗಾಳಿಯಾಗಿ ಬಂದು ಅಪ್ಪಿಕೋ ಬಾ ಪ್ರೀತಿ
ಮಳೆಬಿಲ್ಲೆಯಾಗಿ ಸುರಿದು ತಣಿಸು ಬಾ ಪ್ರೀತಿ
ಕಣ್ ಮುಚ್ಚಿ ಕೈ ಹಿಡಿದು ದೂರ ತೀರಕೆ ಕರೆದೊಯ್ಯಿ ಬಾ ಪ್ರೀತಿ
ಸೊಗಸಾದ ಹೂದೋಟದಲಿ ಸವಿಗಾನ ಹೇಳು ಬಾ ಪ್ರೀತಿ

ನೀ ನನ್ನ ಅಪ್ಪಿದೊಡೆ ಮೈಮನದಲ್ಲೆಲ್ಲ ಹೊಸ ಪುಳಕ
ನೀ ಹನಿಹನಿಯಾಗಿ ತಣಿಸಿದೊಡೆ ಹೃದಯಕೆ ಪ್ರೀತಿಯ ಜಳಕ
ನೀ ನನ್ನ ಕೈ ಹಿಡಿದು ನಡೆಯುವಾಗ ಏನೋ ಒಂಥರ ನಡುಕ
ನೀ ಹಾಡುವಾಗ ನಿನ್ನೊಂದಿಗೆ ಹಾಡಬೇಕೆಂಬ ತವಕ

ಏನೋ ಒಂಥರ ಹೊಸದು ನನ್ನೊಳಗಿನ ಬದಲಾವಣೆ
ಏಕೋ ಏನೋ ಇದಕ್ಕೆಲ್ಲ ಕಾರಣ ನಾ ಕಾಣೆ
ನಿನದೆ ಮೋಡಿ ಇರಬಹುದೆಂದು ಅನುಮಾನ ಕಣೇ
ನನ್ನೊಳಗಿನ ಈ ಗೊಂದಲಗಳ ಬಗೆಹರಿಸು ಬಾ ಜಾಣೆ

- Vರ ( Venkatesha ರಂಗಯ್ಯ )

Monday, July 20, 2009

ಮುಸ್ಸಂಜೆ ಗೆಳತಿ

ರವಿ ಆಗಸದಲ್ಲಿ ಜಾರುವಾಗ ಸಿಕ್ಕಳು ಮುಸ್ಸಂಜೆ ಗೆಳತಿ
ಕವಿ ಮಹಾಶಯನ ಕನಸಿನ ಸಂಗಾತಿ

ಇವಳೇನೆ ಅಪರೂಪದ ಸುಂದರ ಹೆಣ್ಣು
ಇವಳ ಮೇಲೇನೆ ಹದಿಹರೆಯದ ಹುಡುಗರ ಕಣ್ಣು
ಬೇಲೂರು ಶಿಲಾಬಾಲಿಕೆಯ ಪ್ರತಿರೂಪ
ವನಸಿರಿ ವೈಭವದ ಸ್ವರೂಪ

ನನ್ನೆದೆ ಆಕಾಶದ ಅರುಂಧತಿ ನಕ್ಷತ್ರ
ನಾ ಅವಳ ಭಾವನೆಗಳಿಗೆ ಸ್ಪಂದಿಸುವ ಆಪ್ತಮಿತ್ರ
ಅವಳಿಗೆ ನಾನೇನು ಬರೆಯಬೇಕಿಲ್ಲ ಪ್ರೇಮಪತ್ರ
ಏಕೆಂದರೆ ಅವಳಿರುವಳು ಸದಾ ನನ್ನ ಹತ್ರ { ಹತ್ತಿರ }

- Vರ ( Venkatesha ರಂಗಯ್ಯ )

Tuesday, March 24, 2009

ಗೆಳೆಯನಿಗೋಸ್ಕರ

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು
ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ
ಆ ನೆನಪುಗಳ ಚಕ್ರವ್ಯೂಹದಿಂದ ಹೊರಗೆ ಬಾ ಆತ್ಮೀಯ
ನೀ ನೋಡಬೇಕಿರುವುದು ಸಾಕಷ್ಟಿದೆ ಕಣ್ತೆರೆದು ನೋಡೆಯ
ನೀ ಸಾಧಿಸಬೇಕಿರುವುದು ಬೇಕಾದಷ್ಟಿದೆ ಮನಸಿಟ್ಟು ಮಾಡೆಯ

- Vರ ( Venkatesha ರಂಗಯ್ಯ )

Monday, March 23, 2009

ಗೆಳೆಯನ ಪ್ರಾರ್ಥನೆ

ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು
ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು
ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ
ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ

ನಮ್ಮನ್ನು ಅಗಲುವಂತೆ ಮಾಡಿತ್ತು ಆ ಸುಡುಗೆಂಪು ಜಾವ
ನನ್ನೊಲವಿನ ಗೆಳತಿಯ ಸಿಗುವಂತೆ ಮಾಡುವೆಯ ಮುಂಜಾವ
ಸಣ್ಣ ಸಣ್ಣ ಕಾರಣಗಳಿಗೆ ನಡೆದು ಹೋಗಿತ್ತು ನಮ್ಮಿಬ್ಬರ ನಡುವೆ ಘರ್ಷಣೆ
ನನ್ನ ತಪ್ಪು ಮನ್ನಿಸಿ ಮರಳಿ ಬಾ ಬಳಿಗೆ ಎನ್ನುವುದು ನನ್ನ ಪ್ರಾರ್ಥನೆ

ಸೂರ್ಯನಿಗೆ ಹೇಳಿರುವೆ ನಿನಗೆ ಸುಮ್ ಸುಮ್ನೆ ಸುಡಬೇಡೆಂದು
ಗುಲಾಬಿ ಮುಳ್ಳುಗಳಿಗೆ ಮನವಿ ಮಾಡಿರುವೆ ನಿನಗೆ ಚುಚ್ಚಬೇಡೆಂದು
ದುಂಬಿಗಳಲ್ಲಿ ಪ್ರಾರ್ಥನೆ ಮಾಡಿರುವೆ ಮಕರಂದ ಹೀರಬೇಡೆಂದು
ಏಕೆಂದರೆ ನಿನ್ನ ಮನವೊಲಿಸಲು ನನ್ನಲ್ಲಿರುವುದು ಹೂವು ಒಂದೇ ಒಂದು

- Vರ ( Venkatesha ರಂಗಯ್ಯ )

Sunday, March 15, 2009

ನಗು ನಗುತ ನಲಿ ಏನೇ ಆಗಲಿ

ನಗುತ ನಗುತ ಇರಬೇಕು ನಕ್ಕು ನಗಿಸುತಲಿರಬೇಕು
ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು
ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು
ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು

ಪ್ರೀತಿಯೊಂದೆ ರಾಮಬಾಣ ಜೀವನವನ್ನು ಹಸನಾಗಿಸಲು
ಒಲವಿನ ಮನಸೇ ಶಾಂತಿಯ ತಾಣ ದುಃಖವನೆಲ್ಲ ಮರೆಸಲು
ನೋವನ್ನೆಲ್ಲ ಹೊಡೆದು ಬಡೆದು ಜೀವನದಿಂದ ಕಿತ್ತೆಸೆಯಲು
ಬಾಳಿನಲ್ಲಿರುವ ಕತ್ತಲೆಯ ಮರೆಯಾಗಿಸುವುದು ಸುಖದ ಹೊನಲು

- Vರ ( Venkatesha ರಂಗಯ್ಯ )

Saturday, February 28, 2009

ತುಂಟ'ನಲ್ಲ'

ಕಲ್ಲುಸಕ್ಕರೆ ಇವಳ ಗಲ್ಲ
ಕೆನ್ನೆಗಳೆರಡು ರಸಗುಲ್ಲ
ಸೊಂಟವ ಹಿಡಿಯಲು ಬಿಡಲಿಲ್ಲ
ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!!

- Vರ ( Venkatesha ರಂಗಯ್ಯ )

ಶೂರ್ಪನಖಿ (ಶಾಯರಿ)

ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು
ನನ್ನ ಟೆಲಿಫೋನ್ ಸಖಿ
ಭೇಟಿಯಾದಾಗಲೇ ನನಗೆ ಗೊತ್ತಾಯಿತು
ಅವಳು ಶೂರ್ಪನಖಿ !!

- Vರ ( Venkatesha ರಂಗಯ್ಯ )

"ಮಿಸ್"ಕಾಲು (ಶಾಯರಿ)

ಬರಲಿಲ್ಲ ಎಷ್ಟು ಹೊತ್ತಾದರು
ನನ್ನ ಪ್ರಿಯತಮೆಯ ಮಿಸ್ ಕಾಲು
ಆದರೆ ಒಂಟಿ ಕಾಲಲ್ಲಿ ನಿಂತು ಕಾಯುತ್ತಿದ್ದ
ನನಗೆ ನೋಯುತ್ತಿತ್ತು ಎಡಗಾಲು!!

- Vರ ( Venkatesha ರಂಗಯ್ಯ )

Thursday, February 19, 2009

Once again "ಹೃದಯ ಗೀತೆ"

ನಾ ಬರೆದ ಕವಿತೆಗಳು ನನ್ನ ಕವಿತೆಗಳಲ್ಲ
ಒಂಟಿಯಾಗಿದ್ದ ಹೃದಯ ಹೇಳಿದ ಮಧುರ ಮಾತುಗಳು
ಎಲ್ಲ ಪ್ರೇಮಗೀತೆಗಳಲ್ಲಿ ಇದ್ದಳು ಕನಸಿನ ಚೆಲುವೆ
ವಿರಹದ ಹಾಡುಗಳಲ್ಲಿ ತುಂಬಿಹೋಗಿದೆ ಅವಳಿಲ್ಲದ ನೋವೆ

ಸ್ನೇಹದಿಂದ ಪುಟಿದೇಳುವ ಪ್ರೀತಿ ಕಾರಂಜಿ
ಬೆಚ್ಚನೆಯ ಬಾಹುಗಳಲಿ ಆಗುವುದು ಪ್ರೀತಿ ಬಂದಿ
ನನ್ನ ಹೃದಯ ವೀಣೆ ಮೀಟುವ ಬೆರಳು ನಿನ್ನದು
ನಿನ್ನ ಜೊತೆಯಲ್ಲಿ ಜೀವಮಾನ ಕಳೆಯುವ ಆಸೆ ನನ್ನದು

ಇನ್ನು ಎಷ್ಟು ಕವಿತೆ ಬರೆಯುವುದು ಉಳಿದು ಹೋಗಿದೆಯೋ
ಇನ್ನು ಎಷ್ಟು ದಿನ ಅವಳಿಗಾಗಿ ನಾ ಕಾಯಬೇಕಿದೆಯೋ
ಎಷ್ಟು ದೂರ ಕ್ರಮಿಸಿದರು ಮುಗಿಯದು ದಾರಿ
ನೀನಿಲ್ಲದೆ ಹೇಗೆ ಸಾಗುವುದು ಪ್ರೀತಿಯ ಅಂಬಾರಿ

- Vರ ( Venkatesha ರಂಗಯ್ಯ )

Thursday, January 29, 2009

ಹೂಮಾಲೆಯೋ....ಕಾಮಾಲೆಯೋ (ಶಾಯರಿ)

ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ
ಅವಳ ಕಣ್ಣಿನ ನೋಟಗಳು ಚೆಂಡುಹೂವಿನ ಮಾಲೆ
ಆಮೇಲೆ ಗೊತ್ತಾಯಿತು ಅವಳಿಗಿದೆಯೆಂದು ಕಾಮಾಲೆ!!

- Vರ ( Venkatesha ರಂಗಯ್ಯ )

note : ಚೆಂಡು ಹೂವಿನ ಬಣ್ಣ ಹಳದಿ

Tuesday, January 20, 2009

ಕೈಲಾಸಾನಾ...ಉಪವಾಸಾನಾ (ಶಾಯರಿ)

ಕಾಸಿದ್ರೆ ಧರೆಯಲ್ಲೇ ಕಾಣಬಹುದು ಕೈಲಾಸ
ಕಾಸಿದ್ರೆ ಧರೆಯಲ್ಲೇ ಕಾಣಬಹುದು ಕೈಲಾಸ
ಕಾಸಿಲ್ಲಾಂದ್ರೆ ಕಣ್ ಕಣ್ ಬಿಡೋ ಹಾಗೆ ಮಾಡುತ್ತೆ ಉಪವಾಸ !!

- Vರ ( Venkatesha ರಂಗಯ್ಯ )

ಕಾಸಿದ್ರೆ ಕೈಲಾಸ...ಇಲ್ಲಾಂದ್ರೆ ಉಪವಾಸ

ಪ್ರೀತಿ ನಮ್ಮ ಜೀವನ ಗಾಡಿ (ಶಾಯರಿ)

ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ
ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ
ಕಾಸು ಒಂದು ಕುದುರೆ, ಪ್ರೀತಿ ನಮ್ಮ ಜೀವನ ಗಾಡಿ

- Vರ ( Venkatesha ರಂಗಯ್ಯ )

ಪ್ರೀತಿ ಒಂಟಿಯಲ್ಲ (ಶಾಯರಿ)

ನಿಜವಾದ ಪ್ರೀತಿ ಎಂದಿಗೂ ಒಂಟಿಯಲ್ಲ
ನಿಜವಾದ ಪ್ರೀತಿ ಎಂದಿಗೂ ಒಂಟಿಯಲ್ಲ
ಏಕೆಂದರೆ ಪ್ರೀತಿಯನು ಉಳಿಸಲು ಒಲವು ಜೊತೆಗಿರುತ್ತದಲ್ಲ!!

- Vರ ( Venkatesha ರಂಗಯ್ಯ )

ಪ್ರೀತಿ ಅಂದ್ರೆ ಹುಡುಗಿ ಅಲ್ಲ (ಶಾಯರಿ)

ಪ್ರೀತಿಯ ಅನ್ವರ್ಥ ಹುಡುಗಿ ಅಲ್ಲ ಗೆಳೆಯ
ಪ್ರೀತಿಯ ಅನ್ವರ್ಥ ಹುಡುಗಿ ಅಲ್ಲ ಗೆಳೆಯ
ಮುಕ್ತ ಮನಸಿಂದ ನೀ ಪ್ರೀತಿಸೋದು ನಿನಗೆ ಸಿಗುತ್ತೆ ತಿಳಿಯ

- Vರ ( Venkatesha ರಂಗಯ್ಯ )

ಕಾಸಿನ ಮಹಾತ್ಮೆ (ಶಾಯರಿ)

ಕಾಸಿನಿಂದ ಪಡೆದ ಪ್ರೀತಿ ಉಳಿಯೋದು ಮೂರೇ ದಿನ
ಕಾಸಿನಿಂದ ಪಡೆದ ಪ್ರೀತಿ ಉಳಿಯೋದು ಮೂರೇ ದಿನ
ಪ್ರೀತಿಯಿಂದ ಗಳಿಸಿದ ಕಾಸು ಉಳಿಯುವುದು ಸಾವಿರಾರು ದಿನ !!

- Vರ ( Venkatesha ರಂಗಯ್ಯ )

ಕಾರ್ಡ್...ವಾರ್ಡ್ (ಶಾಯರಿ)

ಹುಡುಗಿಯರ ಕೈಗೆ ಸಿಕ್ಕರೆ ನಿನ್ನ ಕ್ರೆಡಿಟ್ ಕಾರ್ಡ್
ಹುಡುಗಿಯರ ಕೈಗೆ ಸಿಕ್ಕರೆ ನಿನ್ನ ಕ್ರೆಡಿಟ್ ಕಾರ್ಡ್
ಕೊನೆಗೆ ನಿನಗೆ ಸಿಗುವುದು ಒಂದೇ ನಿಮ್ಹಾನ್ಸ್ ವಾರ್ಡ್!!!

- Vರ ( Venkatesha ರಂಗಯ್ಯ )

Monday, January 19, 2009

ಗುಲಾಬಿ ಕೊಟ್ಟಳು ಜಿಲೇಬಿ ( ಶಾಯರಿ )

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!!
- Vರ ( Venkatesha ರಂಗಯ್ಯ )

ವಿ. ಸೂ : ನೆನ್ನೆ Dil chahta hai ಫಿಲ್ಮ್ ನೋಡ್ತಾ ಇದ್ದೆ. ಅದರಲ್ಲಿ ಸೈಫ್ ಹೀಗೇನೆ ಮೋಸ ಹೋಗಿದ್ದು :-)

Tuesday, January 13, 2009

ಸಂಕ್ರಾಂತಿ

ಸೂರ್ಯನು ಹೊಸ ಪಥಸಂಚಲನ ಶುರುಮಾಡುವ ವೇಳೆ
ಹೊಲ ಗದ್ದೆಗಳಲ್ಲಿ ತುಂಬಿರುವುದು ಕಬ್ಬಿಣ ಬೆಳೆ
ಸಂಕ್ರಾಂತಿ ಮತ್ತೆ ಬಂತು ಹಸಿರನ್ನು ಹೊತ್ತು ಬಂತು
ಬಾಳಿಗೆ ನನ್ನ ನಲ್ಲೆ ಸಿಹಿಗೆ ಕಬ್ಬಿನ ಜಲ್ಲೆ
ಎಲ್ಲಾನು ಬೀರೋಣ ಸಿಹಿಯನು ಹಂಚೋಣ
ಸಂಕ್ರಾಂತಿ ಮತ್ತೆ ಬಂತು ಬದುಕಲಿ ಹೊಸತನ ತಂತು
ಮುಂಜಾನೆ ರವಿಗೆ ಇಂದು ಹೊಸ ಪಯಣ
ಅವನ ಜೊತೆಯಲ್ಲಿ ನಾವಿ ಸಾಗೋಣ

- Vರ ( Venkatesha ರಂಗಯ್ಯ )

ಕಾರಣ...ಹೂರಣ (ಶಾಯರಿ)

ಕೆಲವರಿಗೆ ಇರುವುದೇ ಇಲ್ಲಾ ಜಗಳವಾಡಲು ಕಾರಣ
ಕೆಲವರಿಗೆ ಇರುವುದೇ ಇಲ್ಲಾ ಜಗಳವಾಡಲು ಕಾರಣ
ಆದರು ಜಗಳವಾಡಲು ಹುಡುಕುತ್ತಿರುತ್ತಾರೆ ಹೂರಣ
- Vರ ( Venkatesha ರಂಗಯ್ಯ )

Monday, January 12, 2009

ಕವನ...ನಮನ ( ಶಾಯರಿ)

ಹೆಂಡತಿ ಇಲ್ಲದಿದ್ದರು ಬರೆಯುತ್ತಿರುವೆ ಶಾಯರಿ ಕವನ
ಹೆಂಡತಿ ಇಲ್ಲದಿದ್ದರು ಬರೆಯುತ್ತಿರುವೆ ಶಾಯರಿ ಕವನ
ಇಷ್ಟೆಲ್ಲಾ ಬರೆಯಲು ಸ್ಪೂರ್ತಿ ಕೊಟ್ಟವರೆಲ್ಲರಿಗೂ ಹೇಳಲೇಬೇಕು ನಮನ

- Vರ ( Venkatesha ರಂಗಯ್ಯ )

ಸ್ಯಾರಿ....ಸ್ಯಾಲರಿ (ಶಾಯರಿ )

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !!

- Vರ ( Venkatesha ರಂಗಯ್ಯ )

ಹೆಂಡ 'ಅತಿ' ( ಶಾಯರಿ )

ದಡೂತಿ ಜಗಳಗಂಟಿ ನನ್ನ ಹೆಂಡತಿ
ದಡೂತಿ ಜಗಳಗಂಟಿ ನನ್ನ ಹೆಂಡತಿ
ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!!

- Vರ ( Venkatesha ರಂಗಯ್ಯ )

Sunday, January 11, 2009

ದನಿ ಇರದ ಮೌನ

ಪದೇ ಪದೇ ನಿನ್ನ ನೆನಪಿಸಿಕೊಂಡಾಗ
ಬಿಕ್ಕಳಿಸಿ ಅಳುತಿದೆ ಮನಸು
ಯಾರದೋ ದನಿಯ ಕೇಳಿ
ತಿರುಗಿ ನೋಡುತಿದೆ ಹೃದಯ
ನೀ ಸನಿಹ ಬಂದಿಲ್ಲವೆಂದು ತಿಳಿದು
ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು

ಪ್ರೀತಿಯು ಹೃದಯದಲ್ಲಿ ಬಂದಿಯಾಗಿದೆ
ಯಾತನೆಯ ಅನುಭವಿಸದೆ ನರಳುತ್ತಿದೆ
ಬಿಡುಗಡೆಗಾಗಿ ನಿನಗಾಗಿ ದಾರಿ ಕಾಯುತ್ತಿದೆ
ನಾನು ಪ್ರೀತಿ ಪಡೆಯಲು ಕಾದು ಕುಳಿತಿರುವ ಪರಾವಲಂಬಿ
ನನ್ನಷ್ಟಕ್ಕೆ ನಾನು ದುಃಖವ ನುಂಗುವ ಸ್ವಾವಲಂಬಿ

ನೀನಿಲ್ಲದ ನೋವಿನ ಅಲೆಗಳು ಬಂದೆರಗಿ ಅಪ್ಪಳಿಸುತ್ತಿವೆ
ನೀನಾಡಿದ ಸವಿ ಮಾತುಗಳು ಎದೆಯಲ್ಲಿ ಪ್ರತಿದ್ವನಿಸುತ್ತಿವೆ
ನನ್ನ ಮೌನದೊಂದಿಗೆ ಸೇರಿ ವಿರಹದ ಹಾಡಗಿವೆ

- Vರ ( Venkatesha ರಂಗಯ್ಯ )

Monday, January 5, 2009

ನಗೆ ಹನಿ

ತಪ್ಪು ಮಾಡದೆ ಇದ್ದರು
ನಮ್ಮ ಗುಂಡ ಕಂಡ ಜೈಲು
ಪೊಲೀಸರ ಏಟಿಗೆ ಬಿಡುಗಡೆಗೆ
ಮುಂಚೆಯೇ ಆಗಿದ್ದ ಐಲು !!

- Vರ ( Venkatesha ರಂಗಯ್ಯ )