Monday, December 1, 2008

ಒಂಟಿ ಮನಸಿನ ಪಯಣ

ಒಂಟಿ ಮನಸಿಗೆ ಜಂಟಿಯಾಗಲು
ಜೊತೆಗಾರರು ಯಾರು ಇಲ್ಲ
ಮಾತುಗಳು ಬಹಳ ಕೇಳುವವರು ವಿರಳ
ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು

ಅರಿವುಂಟು ಈ ಮನಕೆ ಕೇಳುವ ಕಿವಿಗಳು
ಈ ಜಗದಲ್ಲಿ ಇಲ್ಲ ಎಂದು
ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು

ದುಃಖ ಉಮ್ಮಳಿಸಿದಾಗ ಕಣ್ಣೀರು ಹರಿದಾಗ
ಬತ್ತಿ ಹೋಗುತಿದೆ ತಂತಾನೆ ಒರೆಸುವರು ಇಲ್ಲದಂತಾಗಿ
ಪ್ರಶ್ನೆಯ ಮೇಲೆ ಪ್ರಶ್ನೆಯ ಹಾಕುತಿದೆ
ಯಾರ ಹತ್ತಿರ ದುಖ ಕೊಳ್ಳಲಿ ಎಂದು
ಬೆಟ್ಟದಷ್ಟಿಹುದು ಮನಸಿನ ಕನಸುಗಳು
ಕೊನೆಯೇ ಇಲ್ಲದ ಮುಗಿಲಂತಿಹುದು ಮನಸಿನ ಮಾತುಗಳು

ಬರೆಯುತ್ತೆ ಹಾಡುತ್ತೆ ನಡೆಯುತ್ತೆ ಕುಣಿಯುತ್ತೆ
ತಂಗಾಳಿಯಲ್ಲಿ ತೇಲಾಡುತ್ತೆ ಯಾವಾಗಲು ಒಂಟಿಯಾಗಿರುತ್ತೆ
ಈ ಬಾಳ ಬಂಡಿಯಲಿ ತಾನೊಬ್ಬನೇ
ಪಯಣಿಗನೆಂದು ಅರಿತು ಮತ್ತೆ ಮುನ್ನುಗ್ಗುತ್ತೆ

- Vರ ( Venkatesha ರಂಗಯ್ಯ )

No comments: