Tuesday, December 28, 2010

ಮನಸು

ಪರದೆಯ ಮೇಲೆ ಪರದಾಡುತಿರುವ ಮನಸುಗಳೆ
ಸರತಿಯ ಮೇಲೆ ಕಾಯುತಿರುವ ಕನಸುಗಳೆ
ಮನಸುಗಳ ತಣಿಸಲು ಬರುತಿರುವ ಹನಿಗಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಕನಸುಗಳ ಹೊಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಬಯಕೆಗಳ ಹೊಳೆ

ಸೂರ್ಯನ ಕಿರಣಕೆ, ಹನಿಗಳ ಚೆಂದಕೆ, ಅರಳುತಿದೆ ಕಾಮನಬಿಲ್ಲು
ಚಂದ್ರನ ಹೊಳಪಿಗೆ, ಇರುಳಿನ ನಾಚಿಕೆ, ಕಾಣುತಿದೆ ಪ್ರತಿ ಹೂವಲ್ಲು
ಹೋಗು ಹೋಗು ಹೇಳಿ ಹೋಗು ಒಗಟಿನ ಉತ್ತರ
ಇರುವೆ ಏಕೆ ನೀನು ಕೈಗೆ ಸಿಗದಷ್ಟು ಎತ್ತರ

0 comments: