Monday, August 31, 2009

ತಂಗಾಳಿ ಪ್ರೀತಿ

ತಂಗಾಳಿಯಾಗಿ ಬಂದು ಅಪ್ಪಿಕೋ ಬಾ ಪ್ರೀತಿ
ಮಳೆಬಿಲ್ಲೆಯಾಗಿ ಸುರಿದು ತಣಿಸು ಬಾ ಪ್ರೀತಿ
ಕಣ್ ಮುಚ್ಚಿ ಕೈ ಹಿಡಿದು ದೂರ ತೀರಕೆ ಕರೆದೊಯ್ಯಿ ಬಾ ಪ್ರೀತಿ
ಸೊಗಸಾದ ಹೂದೋಟದಲಿ ಸವಿಗಾನ ಹೇಳು ಬಾ ಪ್ರೀತಿ

ನೀ ನನ್ನ ಅಪ್ಪಿದೊಡೆ ಮೈಮನದಲ್ಲೆಲ್ಲ ಹೊಸ ಪುಳಕ
ನೀ ಹನಿಹನಿಯಾಗಿ ತಣಿಸಿದೊಡೆ ಹೃದಯಕೆ ಪ್ರೀತಿಯ ಜಳಕ
ನೀ ನನ್ನ ಕೈ ಹಿಡಿದು ನಡೆಯುವಾಗ ಏನೋ ಒಂಥರ ನಡುಕ
ನೀ ಹಾಡುವಾಗ ನಿನ್ನೊಂದಿಗೆ ಹಾಡಬೇಕೆಂಬ ತವಕ

ಏನೋ ಒಂಥರ ಹೊಸದು ನನ್ನೊಳಗಿನ ಬದಲಾವಣೆ
ಏಕೋ ಏನೋ ಇದಕ್ಕೆಲ್ಲ ಕಾರಣ ನಾ ಕಾಣೆ
ನಿನದೆ ಮೋಡಿ ಇರಬಹುದೆಂದು ಅನುಮಾನ ಕಣೇ
ನನ್ನೊಳಗಿನ ಈ ಗೊಂದಲಗಳ ಬಗೆಹರಿಸು ಬಾ ಜಾಣೆ

- Vರ ( Venkatesha ರಂಗಯ್ಯ )

Monday, July 20, 2009

ಮುಸ್ಸಂಜೆ ಗೆಳತಿ

ರವಿ ಆಗಸದಲ್ಲಿ ಜಾರುವಾಗ ಸಿಕ್ಕಳು ಮುಸ್ಸಂಜೆ ಗೆಳತಿ
ಕವಿ ಮಹಾಶಯನ ಕನಸಿನ ಸಂಗಾತಿ

ಇವಳೇನೆ ಅಪರೂಪದ ಸುಂದರ ಹೆಣ್ಣು
ಇವಳ ಮೇಲೇನೆ ಹದಿಹರೆಯದ ಹುಡುಗರ ಕಣ್ಣು
ಬೇಲೂರು ಶಿಲಾಬಾಲಿಕೆಯ ಪ್ರತಿರೂಪ
ವನಸಿರಿ ವೈಭವದ ಸ್ವರೂಪ

ನನ್ನೆದೆ ಆಕಾಶದ ಅರುಂಧತಿ ನಕ್ಷತ್ರ
ನಾ ಅವಳ ಭಾವನೆಗಳಿಗೆ ಸ್ಪಂದಿಸುವ ಆಪ್ತಮಿತ್ರ
ಅವಳಿಗೆ ನಾನೇನು ಬರೆಯಬೇಕಿಲ್ಲ ಪ್ರೇಮಪತ್ರ
ಏಕೆಂದರೆ ಅವಳಿರುವಳು ಸದಾ ನನ್ನ ಹತ್ರ { ಹತ್ತಿರ }

- Vರ ( Venkatesha ರಂಗಯ್ಯ )

Tuesday, March 24, 2009

ಗೆಳೆಯನಿಗೋಸ್ಕರ

ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ

ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು
ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು

ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ
ಆ ನೆನಪುಗಳ ಚಕ್ರವ್ಯೂಹದಿಂದ ಹೊರಗೆ ಬಾ ಆತ್ಮೀಯ
ನೀ ನೋಡಬೇಕಿರುವುದು ಸಾಕಷ್ಟಿದೆ ಕಣ್ತೆರೆದು ನೋಡೆಯ
ನೀ ಸಾಧಿಸಬೇಕಿರುವುದು ಬೇಕಾದಷ್ಟಿದೆ ಮನಸಿಟ್ಟು ಮಾಡೆಯ

- Vರ ( Venkatesha ರಂಗಯ್ಯ )

Monday, March 23, 2009

ಗೆಳೆಯನ ಪ್ರಾರ್ಥನೆ

ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು
ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು
ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ
ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ

ನಮ್ಮನ್ನು ಅಗಲುವಂತೆ ಮಾಡಿತ್ತು ಆ ಸುಡುಗೆಂಪು ಜಾವ
ನನ್ನೊಲವಿನ ಗೆಳತಿಯ ಸಿಗುವಂತೆ ಮಾಡುವೆಯ ಮುಂಜಾವ
ಸಣ್ಣ ಸಣ್ಣ ಕಾರಣಗಳಿಗೆ ನಡೆದು ಹೋಗಿತ್ತು ನಮ್ಮಿಬ್ಬರ ನಡುವೆ ಘರ್ಷಣೆ
ನನ್ನ ತಪ್ಪು ಮನ್ನಿಸಿ ಮರಳಿ ಬಾ ಬಳಿಗೆ ಎನ್ನುವುದು ನನ್ನ ಪ್ರಾರ್ಥನೆ

ಸೂರ್ಯನಿಗೆ ಹೇಳಿರುವೆ ನಿನಗೆ ಸುಮ್ ಸುಮ್ನೆ ಸುಡಬೇಡೆಂದು
ಗುಲಾಬಿ ಮುಳ್ಳುಗಳಿಗೆ ಮನವಿ ಮಾಡಿರುವೆ ನಿನಗೆ ಚುಚ್ಚಬೇಡೆಂದು
ದುಂಬಿಗಳಲ್ಲಿ ಪ್ರಾರ್ಥನೆ ಮಾಡಿರುವೆ ಮಕರಂದ ಹೀರಬೇಡೆಂದು
ಏಕೆಂದರೆ ನಿನ್ನ ಮನವೊಲಿಸಲು ನನ್ನಲ್ಲಿರುವುದು ಹೂವು ಒಂದೇ ಒಂದು

- Vರ ( Venkatesha ರಂಗಯ್ಯ )

Sunday, March 15, 2009

ನಗು ನಗುತ ನಲಿ ಏನೇ ಆಗಲಿ

ನಗುತ ನಗುತ ಇರಬೇಕು ನಕ್ಕು ನಗಿಸುತಲಿರಬೇಕು
ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು
ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು
ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು

ಪ್ರೀತಿಯೊಂದೆ ರಾಮಬಾಣ ಜೀವನವನ್ನು ಹಸನಾಗಿಸಲು
ಒಲವಿನ ಮನಸೇ ಶಾಂತಿಯ ತಾಣ ದುಃಖವನೆಲ್ಲ ಮರೆಸಲು
ನೋವನ್ನೆಲ್ಲ ಹೊಡೆದು ಬಡೆದು ಜೀವನದಿಂದ ಕಿತ್ತೆಸೆಯಲು
ಬಾಳಿನಲ್ಲಿರುವ ಕತ್ತಲೆಯ ಮರೆಯಾಗಿಸುವುದು ಸುಖದ ಹೊನಲು

- Vರ ( Venkatesha ರಂಗಯ್ಯ )

Saturday, February 28, 2009

ತುಂಟ'ನಲ್ಲ'

ಕಲ್ಲುಸಕ್ಕರೆ ಇವಳ ಗಲ್ಲ
ಕೆನ್ನೆಗಳೆರಡು ರಸಗುಲ್ಲ
ಸೊಂಟವ ಹಿಡಿಯಲು ಬಿಡಲಿಲ್ಲ
ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!!

- Vರ ( Venkatesha ರಂಗಯ್ಯ )

ಶೂರ್ಪನಖಿ (ಶಾಯರಿ)

ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು
ನನ್ನ ಟೆಲಿಫೋನ್ ಸಖಿ
ಭೇಟಿಯಾದಾಗಲೇ ನನಗೆ ಗೊತ್ತಾಯಿತು
ಅವಳು ಶೂರ್ಪನಖಿ !!

- Vರ ( Venkatesha ರಂಗಯ್ಯ )