Tuesday, September 9, 2008

ಪ್ರೀತಿಯ ಫಿಲಾಸಫಿ

ಪ್ರೀತಿ ಕಣ್ಣಿಗೆ ಕಾಣೋಲ್ಲ ಆದರು ನಾವು ಅನಂದಿಸಲ್ವಾ , ಆಹ್ಲಾದಿಸಲ್ವಾ, ಕುರುಡು ಪ್ರೇಮಿಯಾಗಿ ಪ್ರೀತಿಸೋದಿಲ್ವಾ.
ನಾವು ಈ ಜಗತ್ತಿನಲ್ಲಿ ಎಲ್ಲವನ್ನು ಪ್ರೀತಿಸ್ತೀವಿ. ಹಾಕ್ಕೊಳ್ಳೋ ಬಟ್ಟೇನ ಪ್ರೀತಿಸ್ತೀವಿ, ತಲೆ ಬಾಚಿಕೊಳ್ತಾ ಕನ್ನಡಿಯಲ್ಲಿ ಕಾಣೋ ನಮ್ಮ ಬಿಂಬನ ಪ್ರೀತಿಸ್ತೀವಿ. ನಮ್ಮ ಬಿಂಬದ ಪಕ್ಕ ಒಬ್ಬಳು ಸುಂದರ ಹುಡುಗಿಯನ್ನ ಕಲ್ಪಿಸಿಕೊಂಡು ಅವಳನ್ನ ಪ್ರೀತಿಸ್ತೀನಿ. ನಾವು ಏನನ್ನಾದರೂ ನಿಜವಾಗ್ಲೂ ಪ್ರೀತಿಸಿದರೆ ಅದು ನಮ್ಮದು ಆಗುತ್ತೆ ಅಂಥ ಯಾರೋ ಹೇಳ್ತಿದ್ರು. ಅದು ಎಷ್ಟು ನಿಜ ಗೊತ್ತ.
ಪುಸ್ತಕನ ಪ್ರೀತಿ ಮಾಡಿದಾಗ ವಿದ್ಯೆ ನಮ್ಮದಾಗುತ್ತೆ , ಕೆಲಸಾನ ಪ್ರೀತಿ ಮಾಡಿದಾಗ ಯಶಸ್ಸು ನಮ್ಮದಾಗುತ್ತೆ , ನಮ್ಮನ್ನು ನಾವು ಪ್ರೀತಿಸಿದಾಗ ಜಗತ್ತು ನಮ್ಮದಾಗುತ್ತೆ.
ನಾವು ಪ್ರೀತಿ ಮಾಡೋದನ್ನ ನಿಲ್ಲಿಸಿದಾಗ, ನಮ್ಮ ಜೀವ ಕೂಡ ನಮ್ಮ ಜೊತೆ ಇರದಲೇ ಹೊರಟು ಹೋಗುತ್ತೆ. ಅದಕ್ಕೆ ಹೇಳೋದು ಜೀವನದಲ್ಲಿ ಏನನ್ನಾದರೂ ಬಿಡು, ಪ್ರೀತಿ ಮಾಡೋದನ್ನ ಮಾತ್ರ ಬಿಡಬೇಡ.

ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )

No comments: