Monday, September 15, 2008

ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???

ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ. ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ. ಎಷ್ಟು ಜಾತಿ ಹೂವುಗಳು ಈ ಪ್ರಪಂಚದಲ್ಲಿ ಇದಾವೋ ಅಷ್ಟು ರೀತಿಯ ಹುಡುಗೀರು ಇದಾರೆ ಸ್ವಾಮಿ. ಕೆಲವರು ಮಲ್ಲಿಗೆ ಇದ್ದ ಹಾಗೆ, ಇನ್ನು ಕೆಲವರು ಗುಲಾಬಿ ಇದ್ದ ಹಾಗೆ, ಇನ್ನು ಕೆಲವರು ಸಂಪಿಗೆ, ಇನ್ನು ಕೆಲವರು ಕಾಲಿಫ್ಲೋವೆರ್ !!!. ಹೀಗೆ ಇನ್ನು ಅನೇಕಾನೇಕ ಹುಡುಗೀರು ಇದಾರೆ. ಒಂದು ಹುಡುಗಿ ಯಾವ್ ಜಾತಿ ಹೂವಿಗೆ ಸೇರುತ್ತಾಳೆ ಅನ್ನೋದು ಹೂವಿನ ಗುಣ ಮತ್ತು ಹೆಣ್ಣಿನ ಗುಣದ ಹೋಲಿಕೆಯಿಂದ ಗೊತ್ತಾಗುತ್ತೆ. ಒಂದು ಉದಾಹರಣೆ ಇಲ್ಲಿ ಕೊಡ್ತೀನಿ. ಗುಲಾಬಿ ಹೂವಿನಲ್ಲಿ ಮ್ರುದುತ್ವನು ಇದೆ, ಚುಚ್ಚೋ ಸ್ವಭಾವನು ಇದೆ. ಗುಲಾಬಿ ಹೂವಿನ ಎಲೆ ಮುಟ್ಟಿದಾಗ ಆನಂದ ಸಿಗುತ್ತೆ, ಮುಳ್ಳು ಮುಟ್ಟಿದಾಗ ನೋವಾಗುತ್ತೆ. ಗುಲಾಬಿ ಥರ ಇರೋ ಹುಡುಗೀರು ಕೆಲವು ಸಲ ಅವರ ಒಳ್ಳೆತನದಿಂದ ತುಂಬ ಖುಷಿಯಾಗಿರ್ತಾರೆ. ಕೆಲವು ಸಲ ಸಕತ್ ಕಿರ್ಕಿರಿ ಮಾಡ್ತಾರೆ. ಇನ್ನು ಕೆಲವರು ನೋಡೋದಿಕ್ಕೆ ಸೀದಾ ಸಾದಾ ಥರ ಇರ್ತಾರೆ ಆದ್ರೆ ತುಂಬ ತಲೆ ತಿಂತಾರೆ. ಹೀಗೆ ಯೋಚನೆ ಮಾಡಿದ್ರೆ ಹೋಲಿಕೆಗಳು ಸಿಗ್ತವೆ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ಸತ್ಯ ಅಂತ ಅಲ್ಲ..ಕೆಲವು ಹೋಲಿಕೆಗಳು ಇದ್ದೆ ಇರ್ತವೆ ಅನ್ನೋದು ನನ್ನ ಅಭಿಪ್ರಾಯ. ಹೂವಿನ ಗುಣದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರೋದ್ರಿಂದ ನಿಮ್ಮ ಮನದರಸಿ ಗುಣ ಯಾವುದು ಅಂಥ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ. ಅವರ ಗುಣ ಅರ್ಥ ಆದಾಗ , ಅವರ ಜೊತೆ ಹೇಗೆ ಇರಬೇಕು ಅನ್ನೋದು ಗೊತ್ತಾಗುತ್ತೆ. ಈ ಸತ್ಯ ತಿಳಿದಾಗ ಹೂವು(ಹುಡುಗಿ) ಬಾಡದ (ಬೇಜಾರಾಗದ) ಹಾಗೆ ನೀವು ನೋಡಿಕೊಳ್ತೀರ. ಆಗ ನಿಮ್ಮ ಜೀವನ ಸಕತ್ ಚೆನ್ನಾಗಿರುತ್ತೆ....ನೀವೇನಂತೀರಾ ಗೆಳೆಯರೇ ಮತ್ತು ಗೆಳತಿಯರೆ ?

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

No comments: